ಬೆಂಗಳೂರು: ಗಾರ್ಡನ್ ಸಿಟಿಯ ರೌಡಿ ಲೋಕಕ್ಕೆ ಅಧಿಪತಿಯಾಗಲು ಹೊಸ ರೌಡಿಗಳು ಭರ್ಜರಿ ಪ್ಲಾನ್ ಮಾಡ್ತಿದ್ದಾರೆ. ನಿನ್ನೆ ಸಂಜು ಸ್ಫಾಟ್ ರಾಜನ ಮಕ್ಕಳಾದ ಸಂಜು ,ವೀರು ಬಿಲ್ಡಪ್ ಕೊಟ್ಟು ವಿಡಿಯೋ ವೈರಲ್ ಮಾಡಿದ್ರೆ ಇಂದು ಮತ್ತೊಬ್ಬ ರೌಡಿ ಅಂತಹದ್ದೆ ಕೆಲಸ ಮಾಡಿದ್ದಾನೆ.
ಎಸ್ 2019 ರ ಮಾರ್ಚ್ ನಲ್ಲಿ ಬೆಂಗಳೂರು ಭೂಗತ ಲೋಕವನ್ನೆ ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜ@ ಕ್ಯಾಟ್ ರಾಜ, ಲಕ್ಷ್ಮಣನ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ. ಎರಡು ವಾರಗಳ ಹಿಂದಷ್ಟೇ ಜೈಲಿಂದ ರಿಲೀಸ್ ಆಗ್ತಿದ್ದಂತೆ ಬೆಂಗಳೂರು ಕಿಂಗ್ ಅಂತ ಶೋ ಅಪ್ ಕೊಟ್ಟು ರೀಲ್ಸ್ ಮಾಡಿ ವೈರಲ್ಮಾಡಿದ್ದಾನೆ.
ಇನ್ನೂ ಲಕ್ಷ್ಮಣನ ಕೊಲೆ ಕೇಸ್ ನಲ್ಲಿ ಕ್ಯಾಟ್ ನ ಎರಡು ಕಾಲಿಗೆ ಗುಂಡು ಹೊಡೆದು ಅರೆಸ್ಟ್ ಮಾಡಿದ್ರು. ಇಷ್ಟಾದ್ರು ಬುದ್ದಿಕಲಿಯದ ಕ್ಯಾಟ್ ಮತ್ತೆ ಹವಾ ಮೇಂಟೈನ್ ಮಾಡಲು ಸುತ್ತ ಹುಡುಗ್ರು ಹಾಕೊಂಡು ಫುಲ್ ಬಿಲ್ಡಪ್ ಕೊಟ್ಟಿದ್ದಾನೆ.
ಇನ್ನೂ ವಿಡಿಯೋ ಕೆಲ ಪೊಲೀಸ್ ಅಧಿಕಾರಿಗಳ ಕೈ ಸೇರ್ದಿದ್ದಂತೆ ಕ್ಯಾಟ್ ರಾಜ ಅರೆಸ್ಟ್ ಆಗೋ ಭಯದಲ್ಲಿ ಸಿಟಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.
PublicNext
13/05/2022 09:21 am