ಹಾಸನ : ಪಿಎಸ್ ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 50 ನೇ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ಮನುಕುಮಾರ್ ಎಂಬಾತನ ಸಹೋದರ ನೇಣಿಗೆ ಶರಣಾಗಿದ್ದಾನೆ. ಹಾಸನ ಜಿಲ್ಲೆ, ಹೊಳೆನರಸೀಪುರದ ಒಗ್ಗರಣೆ ಬೀದಿಯಲ್ಲಿರುವ ತಮ್ಮ ಮನೆಯಲ್ಲಿ ವಾಸು (36) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾಮಾಡಲಾಗಿತ್ತು. ವಾಸು ಸಹೋದರ ಮನು ತಾತ್ಕಾಲಿಕ ಪಟ್ಟಿಯಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದನು. ಪಿಎಸ್ಐ ಹಗರಣದಲ್ಲಿ ಮನುನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ವಾಸು ಕಳೆದ ರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿರುವ ಘಟನೆ ಸಂಬಂಧ
ಹಲವು ಅನುಮಾನಗಳಿಗೆ ಹುಟ್ಟಿಕೊಂಡಿವೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಷ್ಟೇಅಲ್ಲದೆ ಪಿಎಸ್ ಐ ಕೆಲಸಕ್ಕೆ 40 ಲಕ್ಷ ಹಣ ಕೊಟ್ಟಿರುವ ಬಗ್ಗೆ ಅನುಮಾನವು ಶುರುವಾಗಿದ್ದು ಹಣವೂ ಹೋಯ್ತು, ತಮ್ಮನ ಕೆಲಸವೂ ಹೋಯ್ತು ಎಂದು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
PublicNext
11/05/2022 11:34 am