ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಮುಂದೆ ಬೈಕ್ ನಿಲ್ಲಿಸೋರೇ ಹುಷಾರ್ !

ಬಾಗಲಕೋಟೆ: ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಡೀಸೆಲ್ ಬೆಲೆನೂ ಏನೂ ಕಡಿಮೆ ಇಲ್ಲ. ಇಂತಹ ಸ್ಥಿತಿಯಲ್ಲಿ ಈಗ ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳ ಪೆಟ್ರೋಲ್ ಕಳ್ಳತನ ಆಗುತ್ತಿದೆ. ಅಂತಹ ಒಂದು ಖದೀಮರು ಗ್ಯಾಂಗ್ ಅನ್ನ ಬಾಗಲಕೋಟೆ ಪೊಲೀಸರು ಈಗ ಬಂಧಿಸಿದ್ದಾರೆ.

ಆರೀಫ್ ಬೇಪಾರಿ (20), ಹುಲಿಗೆಪ್ಪ ಪಾತ್ರೋಟ್ (25), ಸಮೀರ್ ಚಿಮ್ಮಲಗಿ (20), ಗೋಪಾಲ್ ಗಾವರವಾಡ (23) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತ ಇವರಲ್ಲಿ ಮೂವರು ಬಾಗಲಕೋಟೆ ನವನಗರದ ನಿವಾಸಿಗಳಾಗಿದ್ದಾರೆ. ಇವರಲ್ಲೊಬ್ಬ ಬಾದಾಮಿ ತಾಲೂಕಿಗೆ ಸೇರಿದವನಾಗಿದ್ದಾನೆ. ನವನಗರ ಪೊಲೀಸ್ ಠಾಣೆಯ ಪೊಲೀಸರು ಇವರನ್ನ ಬಂಧಿಸಿದ್ದಾರೆ.

Edited By :
PublicNext

PublicNext

04/05/2022 01:18 pm

Cinque Terre

47.06 K

Cinque Terre

3