ಲಕ್ನೋ: ಉತ್ತರ ಪ್ರದೇಶದ ನೌತನ್ವಾ ಪೋಲಿಸ್ ಠಾಣೆಯೊಂದರಲ್ಲಿ ಮಹಿಳಾ ಸಿಬ್ಬಂದಿ ಇದ್ದರೂ ಹೆಡ್ ಕಾನ್‍ಸ್ಟೇಬಲ್ ಒಬ್ಬ ಅರೆಬೆತ್ತಲಾಗಿ ತಿರುಗಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಠಾಣೆಯ ಎಸ್‌ಪಿ ಪೇದೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಹೀಗೆ ಅರೆಬೆತ್ತಲಾಗಿ ತಿರುಗಾಡಿದ ಹೆಡ್ ಕಾನ್‍ಸ್ಟೇಬಲ್ ಗಂಗೋತ್ರಿ ಯಾದವ್ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಎಸ್‌ಪಿ ಡಾ.ಕೌಸ್ತುಭ್ಅವರು, ಎಲ್ಲ ಪೊಲೀಸರಿಗೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ಒಳ ಉಡುಪು ಧರಿಸುವುದು ಸಲ್ಲದು. ಅಲ್ಲಿಗೆ ಮಹಿಳೆಯರೂ ದೂರುಗಳೊಂದಿಗೆ ಬರುತ್ತಲೇ ಇರುತ್ತಾರೆ. ವಿಡಿಯೋ ಆಧಾರದ ಮೇಲೆ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
PublicNext
03/05/2022 07:01 pm