ಚಾಮರಾಜನಗರ : ರಂಜಾನ್ ಹಬ್ಬದ ದಿನವೇ ಎರಡು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ಉಂಟಾದ ಘಟನೆ ಚಾಮರಾಜನಗರದಲ್ಲಿ ಕೊಳ್ಳೇಗಾಲ ಪಟ್ಟಣದ ಸಾಮಂದಗೇರಿಯಲ್ಲಿ ನಡೆದಿದೆ. ಎರಡು ಗುಂಪಿನ ಯುವಕರು ದೊಣ್ಣೆ, ಕಲ್ಲು, ಇಟ್ಟಿಗೆಯಿಂದ ಬಡಿದಾಡಿಕೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಲಭೆಕೋರರನ್ನು ಚದುರಿಸಿದ್ದಾರೆ.
ಇನ್ನು ರಾಜಕೀಯ ವ್ಯಕ್ತಿಗಳು ಹಬ್ಬದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಾಮಂದಗೇರಿ ಬೀದಿ ನಿವಾಸಿ ನಾಸೀರ್ ಷರೀಫ್ ಹಾಗು ಕಿಜರ್ ಬೆಂಬಲಿಗರ ನಡುವೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಮಾರಾಮಾರಿಯಲ್ಲಿ ಗಾಯಗೊಂಡ 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
03/05/2022 06:25 pm