ಯಾದಗಿರಿ: ಜಿಲ್ಲೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಮೃಗಿಯ ರೀತಿಯಲ್ಲಿ ಎಸಗಿರೋ ಕೃತ್ಯ ಮಾಸುವ ಮುನ್ನವೆ ಜಿಲ್ಲೆಯಲ್ಲಿ ಮತ್ತೊಂದು ರೇಪ್ ಕೇಸ್ ಬೆಳಕಿಗೆ ಬಂದಿದೆ.
ಇದೆ ತಿಂಗಳು ಏಪ್ರಿಲ್ 26 ರಂದು ಎಂದಿನಂತೆ ಬೆಳಗ್ಗೆ 10 ಗಂಟೆ ಸುಮಾರಿಗೆ ಎಂ.ಹೊಸಳ್ಳಿ ತಾಂಡಾದಿಂದ ಆಟೋದಲ್ಲಿ ಕುಳಿತು ಯಾದಗಿರಿಗೆ ಕೆಲಸಕ್ಕೆ ಹೋಗುತ್ತಿರುವ ಮಹಿಳೆಗೆ ಆಟೋ ಚಾಲಕ ಹಾಗೂ ಆತನ ಗೆಳೆಯ ಸೇರಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದಾರೆ.
ಎಂ. ಹೊಸಳ್ಳಿ ಗ್ರಾಮದ ಆಟೋ ಚಾಲಕ ಹನುಮಂತ ಗೆಳೆಯ ನರಸಪ್ಪನಿಗೆ ಕಾಲ್ ಮಾಡಿ ಕೆರೆಸಿಕೊಂಡು, ಇಬ್ಬರು ಸೇರಿ ಯಾದಗಿರಿ ಸಮೀಪದ ವರ್ಕನಹಳ್ಳಿ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಪಾಳು ಬಿದ್ದ ಮನೆಯಲ್ಲಿ ಮಹಿಳೆಯನ್ನ
ಬಲತ್ಕಾರ ಮಾಡಿದ್ದಾನೆ. ಅಲ್ಲದೇ ಗೆಳೆಯ ನರಸಪ್ಪ ತನ್ನ ಮೊಬೈಲ್ ನಲ್ಲಿ ಈ ಕೃತ್ಯದ ವೀಡಿಯೋ ಮಾಡಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾಳೆ.
ಇದಲ್ಲದೇ ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಅಂತ ಪ್ರಾಣ ಬೆದರಿಕೆ ಹಾಕಿ ಅಲ್ಲಿಯೇ ನನ್ನನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಂತ್ರಸ್ತಗೆ ರಕ್ಷಣೆ ನೀಡಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
PublicNext
28/04/2022 06:05 pm