ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲು ನಡೆದ ಹಗರಣದ ಅಕ್ರಮಗಳು ಬಗೆದಷ್ಟು ಬಯಲಾಗುತ್ತಿವೆ. ಇದುವರೆಗಿನ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಸದ್ಯ ಈ ಹಗರಣದ ಇನ್ನೋರ್ವ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ರವಿವಾರ ಬೆಳಗಿನ ಜಾವ 3 ಗಂಟೆಗೆ ರುದ್ರಗೌಡ ಹಾಗೂ ಸ್ನೇಹಿತ ಮಂಜುನಾಥ್ ಎಂಬಾತರನ್ನು ಕಲಬುರಗಿಯ ಸಿಐಡಿ ಕಚೇರಿಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗಿದೆ.
ಈ ಇಬ್ಬರೂ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿರೆಂಬ ಆರೋಪ ಇದೆ. ಬಂಧಿತನಾದ ರುದ್ರಗೌಡ ಪಾಟೀಲ್ ಅಫಜಲ್‌ಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿಯಾಗಿದ್ದಾನೆ. ಈತನ ಮೇಲೆ ಗ್ರಾಮ ಪಂಚಾಯತಿಯ 5 ಕೋಟಿ ಹಣ ನುಂಗಿ ಹಾಕಿದ್ದಾನೆ ಎಂಬ ಆರೋಪವೂ ಇದೆ. ಈತನ ಸಹೋದರ ಮಹಾಂತೇಶ್ ಪಾಟೀಲ್ ಎಂಬಾತನನ್ನು ಈಗಾಗಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಮಹಾಂತೇಶ್‌ಗೆ ರುದ್ರಗೌಡ ಕರೆ ಮಾಡಿದ್ದ. ಸ್ವೀಕೃತವಾಗಿದ್ದ ಕರೆಯ ನಂಬರ್ ಚೇಸ್ ಮಾಡಿದ ಪೊಲೀಸರು ರುದ್ರಗೌಡ ಹಾಗೂ ಆತನ ಸ್ನೇಹಿತ ಮಂಜುನಾಥ್‌ನನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿ ಕಲಬುರಗಿಗೆ ತಂದಿದ್ದಾರೆ. ಇಬ್ಬರೂ ಆರೋಪಿಗಳನ್ನು ಕಲಬುರಗಿಯ ಜ್ಞಾನಜ್ಯೋತಿ ಶಾಲೆ ಸೇರಿ ಹಲವೆಡೆ ಮಹಜರು ಮಾಡಲು ಸಿಐಡಿ ಅಧಿಕಾರಿಗಳು ಕರೆದೊಯ್ಯಲಿದ್ದಾರೆ.
PublicNext
24/04/2022 09:18 am