ಲಕ್ನೋ: ವರದಕ್ಷಿಣೆ ನೀಡಲಿಲ್ಲವೆಂದು ವಿವಾಹಿತೆಗೆ ಪತಿಯ ಕುಟುಂಬಸ್ಥರು ಆ್ಯಸಿಡ್ ಕುಡಿಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೀರತ್ನ ಲಿಸಾಡಿ ಗೇಟ್ ನಿವಾಸಿ ಯಾಸ್ಮಿನ್ ಕೊಲೆಯಾದ ಮಹಿಳೆ. ಗುರುವಾರ ರಾತ್ರಿ ಯಾಸ್ಮಿನ್ ಪತಿ, ಅತ್ತೆ ಸೇರಿ ಈ ಕೃತ್ಯವೆಸಗಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ಬೆನ್ನಲ್ಲೇ ಮೃತ ಮಹಿಳೆ ಯಾಸ್ಮಿನ್ ಸಂಬಂಧಿಕರು ಆಕೆಯ ಪತಿ ಸೇರಿದಂತೆ ಐವರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
PublicNext
16/04/2022 10:16 pm