ಲಕ್ನೋ: 11 ವರ್ಷದ ಬಾಲಕನನ್ನು ಅಪಹರಿಸಿದ ಹಣಕ್ಕೆ ಬೇಡಿಕೆ ಇಟ್ಟಿದ್ದ ಯುವಕನ ಕಾಲಿಗೆ ಗುಂಡಿಕ್ಕಿದ ಉತ್ತರ ಪ್ರದೇಶದ ಮುಜಾಫರ್ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಮೀರತ್ ನಿವಾಸಿ ಮೊಹಮ್ಮದ್ ಮಾರ್ಚ್ 7ರಂದು ಮುಜಾಫರ್‌ನಗರದ ದಕ್ಷಿಣ ಖಲಾಪರ್‌ನಿಂದ ಝಕಿ ಎಂಬ ಬಾಲಕನನ್ನು ಅಪಹರಿಸಿದ್ದ. ಶುಕ್ರವಾರ ಮಧ್ಯಾಹ್ನ ಆರೋಪಿಗಳು ಮಗುವಿನ ತಂದೆಗೆ ಕರೆ ಮಾಡಿ ಒಂದು ಲಕ್ಷ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದರು. ಈ ಕುರಿತು ಬಾಲಕನ ಪೊಲೀಸರು ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕನ ತಂದೆಗೆ ಒಂದು ಲಕ್ಷ ರೂಪಾಯಿ ಕೊಟ್ಟು ಆರೋಪಿಗಳ ಬಳಿಗೆ ಕಳುಹಿಸಿದ್ದಾರೆ. ಇನ್ನು ಮಫ್ತಿಯಲ್ಲಿದ್ದ ಪೊಲೀಸರು ಅವರನ್ನು ಫಾಲೋ ಮಾಡಿದ್ದಾರೆ. ಬಳಿಕ ಜಮೀನಿನಲ್ಲಿ ಆರೋಪಿ ಮೊಹಮ್ಮದ್ ಹಣ ಪಡೆಯಲು ಬರುತ್ತಿದ್ದಂತೆ ಆತನ ಮೇಲೆ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ. ಈ ವೇಳೆ ಆರೋಪಿ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ಇನ್ನು ಪೊಲೀಸರು ಅಪಹರಣಕ್ಕೆ ಒಳಗಾದ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
PublicNext
16/04/2022 04:21 pm