ನವದೆಹಲಿ: ಮಹಿಳೆಯೊಬ್ಬಳು ದೆಹಲಿಯ ಅಕ್ಷರಧಾಮ್ ಮೆಟ್ರೋ ಸ್ಟೇಷನ್ ಕಟ್ಟಡದಿಂದ ಜಿಗಿದಿದ್ದು, ಆಕೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ರಕ್ಷಣೆ ಮಾಡಿದೆ.
ಮಹಿಳೆಯನ್ನು ರಕ್ಷಿಸಿದ ವಿಡಿಯೋವನ್ನು ಸಿಐಎಸ್ಎಫ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ 'ಜೀವಗಳನ್ನು ಉಳಿಸಲಾಗುತ್ತಿದೆ. ಸಿಐಎಸ್ಎಫ್ ಸಿಬ್ಬಂದಿಯ ತ್ವರಿತ ಮತ್ತು ವಿವೇಕಯುತ ಪ್ರತಿಕ್ರಿಯೆಯು ಮಹಿಳೆಯ ಜೀವವನ್ನು ಉಳಿಸಿದೆ" ಎಂದು ಬರೆದುಕೊಂಡಿದೆ.
ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಐಎಸ್ಎಫ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
PublicNext
14/04/2022 04:28 pm