ತಿರುವನಂತಪುರಂ: ಪಾಪಿ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಉಳಿದುಕೊಳ್ಳಲು ತನ್ನ ಮೂರು ವರ್ಷದ ಮಗನನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ.
ಆರೋಪಿ 22 ವರ್ಷದ ಆಸಿಯಾಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತನ್ನ ಕೃತ್ಯವನ್ನು ತಪ್ಪು ಒಪ್ಪಿಕೊಂಡಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 'ಆಸಿಯಾ ಮತ್ತು ಆಕೆಯ ಪತಿ ಮೊಹಮ್ಮದ್ ಶಮೀರ್ ಕಳೆದ ಒಂದು ವರ್ಷದಿಂದ ಬೇರ್ಪಟ್ಟಿದ್ದರು. ಇದರ ಬೆನ್ನಲ್ಲೇ ಆಸಿಯಾ ಬೇರೆ ವ್ಯಕ್ತಿ ಜೊತೆ ಸಂಬಂಧವಿಟ್ಟುಕೊಂಡಿದ್ದಳು. ಆದರೆ ಆಸಿಯಾಗೆ ಮಗುವಿದೆ ಎಂಬ ವಿಚಾರ ಆಸಿಯಾ ಪ್ರಿಯಕರನಿಗೆ ಗೊತ್ತಿರಲಿಲ್ವಂತೆ. ಇದರ ಬಗ್ಗೆ ಗೊತ್ತಾಗುತ್ತಿದ್ದಂತೆ ಇಬ್ಬರ ನಡುವೆ ಜಗಳವಾಗಿದೆ. ಆತ ತನ್ನಿಂದ ದೂರ ಹೋಗುತ್ತಾನೆಂಬ ಕಾರಣದಿಂದ ಮಗುವನನ್ನ ಕೊಲೆ ಮಾಡಿದ್ದಾಳೆ.
PublicNext
13/04/2022 04:34 pm