ಚಿಕ್ಕಮಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೆಡ್ ಕಾನ್ಸ್‌ಟೇಬಲ್‌ವೊಬ್ಬರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬಣಕಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಬಿ. ಪರಮೇಶ್ವರಪ್ಪ (51) ಎಂಬುವರು ಅಸ್ವಸ್ಥಗೊಂಡಿದ್ದರು. ಕೂಡಲೇ ಮೂಡಿಗೆರೆ ಎಂಜಿಎಅ ಆಸ್ಪತ್ರೆಗೆ ಕರೆದ್ಯೊಯಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರಮೇಶ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಕೆ.ಬಿ. ಪರಮೇಶ್ವರಪ್ಪ ಅವರು ಚಿಕ್ಕಮಗಳೂರು ತಾಲ್ಲೂಕು ಲಕ್ಯಾ ಹೋಬಳಿ ಕಣಿವೆ ಹಳ್ಳಿ ಮೂಲದವರಾಗಿದ್ದು ಕಳೆದ ಐದು ವರ್ಷಗಳಿಂದ ಬಣಕಲ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆ.ಬಿ. ಪರಮೇಶ್ವರಪ್ಪ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಣಿವೆ ಹಳ್ಳಿಯ ಖಾಸಗಿ ಜಮೀನಿನಲ್ಲಿ ಸೋಮವಾರ ಅಂತ್ಯಸಅಸ್ಕಾರ ನೆರವೇರಿಸಲಾಯಿತು.
ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್, ಬಣಕಲ್ ಠಾಣೆ ಪಿಎಸ್‌ಐ ಗಾಯತ್ರಿ, ಬಾಳೂರು ಠಾಣೆ ಪಿಎಸ್‌ಐ ರೇಣುಕಾ, ಕೊಪ್ಪ ಠಾಣೆಯ ಪಿಎಸ್‌ಐ ಶ್ರೀನಾಥ್ ರೆಡ್ಡಿ, ಕಳಸ ಠಾಣೆ ಎಎಸ್‌ಐ ಮೋಹನ್‌ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಮೃತರ ಅಂತಿಮ ದರ್ಶನ ಪಡೆದರು.
PublicNext
11/04/2022 10:56 pm