ಲಕ್ನೋ: ವರ್ಗಾವಣೆ ಕೇಳಿದ್ದಕ್ಕೆ ನಿನ್ನ ಪತ್ನಿಯನ್ನು ಒಂದು ರಾತ್ರಿ ಕಳಿಸು ಎಂದ ಮೇಲಧಿಕಾರಿ ಮಾತಿಗೆ ಮನನೊಂದ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು. ಉತ್ತರ ಪ್ರದೇಶದ ವಿದ್ಯುತ್ ಸರಬರಾಜು ಡಿಪಾರ್ಟ್‌ಮೆಂಟ್‌ನ ಗೋಕುಲ್ ಪ್ರಸಾದ್ (45) ಆತ್ಮಹತ್ಯೆಗೆ ಶರಣಾದ ಉದ್ಯೋಗಿ. ಗೋಕುಲ್ ಪ್ರಸಾದ್ ಕಳೆದ 22 ವರ್ಷಗಳಿಂದ ವಿದ್ಯುತ್ ಇಲಾಖೆಯಲ್ಲಿ ಲೈನ್‌ಮ್ಯಾನ್ ಆಗಿ ನಿಯೋಜನೆಗೊಂಡಿದ್ದರು. ಆದರೆ ಜೂನಿಯರ್ ಇಂಜಿನಿಯರ್ ಕಿರುಕುಳದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೋಕುಲ್ ಪ್ರಸಾದ್ ಸದ್ಯ ಲಖಿಂಪುರ ಖೇರಿಯಲ್ಲಿರುವ ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ (ಯುಪಿಸಿಎಲ್) ಪಾಲಿಯಾ ಪವರ್ ಸ್ಟೇಷನ್‌ನಲ್ಲಿ ಲೈನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಸಾಯುವ ಮುನ್ನ ಪ್ರಸಾದ್, ಜೂನಿಯರ್ ಇಂಜಿನಿಯರ್ (ಜೆಇ) ವಿರುದ್ಧ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಪ್ರಸಾದ್, 'ಜೂನಿಯರ್ ಇಂಜಿನಿಯರ್ ಮತ್ತು ಕೆಲ ದುಷ್ಕರ್ಮಿಗಳು ವರ್ಗಾವಣೆಗೆ ಪ್ರತಿಯಾಗಿ ತನ್ನ ಹೆಂಡತಿಯನ್ನು ಒಂದು ರಾತ್ರಿ ಕಳುಹಿಸುವಂತೆ ಒತ್ತಾಯಿಸುತ್ತಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ' ಎಂದು ಕಣ್ಣೀರಿಟ್ಟಿದ್ದಾರೆ.
PublicNext
11/04/2022 07:43 pm