ಶಹಜಹಾನ್ ಪುರ (ಉತ್ತರ ಪ್ರದೇಶ) : ಶಹಜಹಾನ್ ಪುರದಲ್ಲಿ 1994 ರಿಂದ 1996ರವರೆಗೆ ಸುಮಾರು 2 ವರ್ಷಗಳ ಕಾಲ ಇಬ್ಬರು ಸಹೋದರರು ನೆರೆ ಮನೆಯ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎನ್ನುವ ಆರೋಪ ಇದೀಗ ಸಾಬೀತಾಗಿದೆ.
ಸುಮಾರು 28 ವರ್ಷಗಳ ನಂತರ ಇಬ್ಬರು ಸಹೋದರರ ಮೇಲೆ ಅತ್ಯಾಚಾರ ದೂರು ದಾಖಲಾಗಿ, ಅತ್ಯಾಚಾರ ಪ್ರಕರಣ ಸಾಬೀತಾಗಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಬೆಳಕಿಗೆ ಬಂದಿದೆ. ಇನ್ನು ಈ ಘಟನೆಯಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಳು. ಯಾವುದೇ ದೂರು ದಾಖಲಿಸದಂತೆ ಆರೋಪಿಗಳು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ನಂತರ ಆ ಮಗುವನ್ನು ಉತ್ತರ ಪ್ರದೇಶದ ದಂಪತಿ ದತ್ತು ತೆಗೆದುಕೊಂಡಿದ್ದರು.
2020ರಲ್ಲಿ ಸಂತ್ರಸ್ತೆ ತನ್ನ ಮಗನನ್ನು ಭೇಟಿಯಾಗಿದ್ದು, ಆಗ ಆಕೆಯ ಮಗ ಆರೋಪಿ ಸಹೋದರರ ವಿರುದ್ಧ ಕಾನೂನು ಹೋರಾಟ ಮಾಡುವಂತೆ ಸಲಹೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತೆಯ ಮಗನ ಡಿಎನ್ಎ ಆರೋಪಿ ಸಹೋದರರಲ್ಲಿ ಒಬ್ಬರು ನಿಜವಾಗಿಯೂ ಸಂತ್ರಸ್ತೆಯ ಮಗನ ತಂದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೂಲಕ ಸಂತ್ರಸ್ತೆಯ ಆರೋಪ ಸಾಬೀತಾಗಿದೆ.
ಸದ್ಯ ನನ್ನ ತಾಯಿಗೆ ನ್ಯಾಯವನ್ನು ಒದಗಿಸುತ್ತೇನೆ ಎಂದು ಸಂತ್ರಸ್ತೆಯ ಮಗ ಹೇಳಿದ್ದಾನೆ.
PublicNext
08/04/2022 11:00 pm