ಮಂಡ್ಯ: ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಪುಂಡರು ಗುಂಪು ಹಲ್ಲೆ ಮಾಡಿದ್ದಾರೆ.
ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿಯ ಗೋಲ್ಡನ್ ಡಾಬಾದಲ್ಲಿ ಈ ಘಟನೆ ನಡೆದಿದೆ. ಡಾಬಾದಲ್ಲಿ ಕಂಠಪೂರ್ತಿ ಕುಡಿದ ಪುಂಡರು ಬಿಲ್ ಕೇಳಿದ್ದಕ್ಕೆ ಕಿರಿಕ್ ತೆಗೆದಿದ್ದಾರೆ. ನಂತರ ಮಾಲೀಕನ ಮೇಲೆರಗಿ ಬಿಯರ್ ಬಾಟಲಿಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಪುಡಿ ಪುಂಡರಿಗಾಗಿ ಹುಡುಕಾಡುತ್ತಿದ್ದಾರೆ.
PublicNext
08/04/2022 03:14 pm