ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಪ್ರಾಪ್ತೆಯನ್ನ ಪ್ರೀತಿಸಿದ್ದಕ್ಕೆ ಜೈಲು ಸೇರಿದ ಯುವಕ, ಜೈಲಲ್ಲಿಯೇ ನೇಣಿಗೆ ಶರಣು

ಗದಗ: ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿದ್ದಕ್ಕೆ ಪೋಕ್ಸೋ ಕಾಯ್ದೆ ಅಡಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಜೈಲಿನಲ್ಲಿಯೇ ನೇಣಿಗೆ ಶರಣಾದ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 20 ದಿನಗಳಿಂದಲೂ ಯುವಕ ರಾಜು ಜೈಲಿನಲ್ಲಿಯೇ ಇದ್ದ. ಪ್ರೀತಿಸಿದ ಅಪ್ರಾಪ್ತ ಬಾಲಕಿ ಮತ್ತು ಪೋಷಕರು ಯುವಕನನ್ನ ಜೈಲಿನಲ್ಲಿಯೇ ಭೇಟಿಯಾಗಿ ಮಾತುಕತೆನೂ ನಡೆಸಿದ್ದರು.

ಆದರೆ, ಇವರೆಲ್ಲ ಭೇಟಿಯಾದ ಬೆನ್ನಲ್ಲಿಯೇ ಯುವಕ ರಾಜು ಆತ್ಮಹತ್ಯೆಗೆ ಶರಣನಾಗಿದ್ದಾನೆ. ಈ ವಿಷಯ ತಿಳಿದ ಪೋಷಕರು ಜೈಲು ಬಳಿ ಬಂದು ಕಣ್ಣೀರಿಟ್ಟಿದ್ದಾರೆ. ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ತಮ್ಮ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.

Edited By :
PublicNext

PublicNext

08/04/2022 10:41 am

Cinque Terre

51.4 K

Cinque Terre

5

ಸಂಬಂಧಿತ ಸುದ್ದಿ