ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

1 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಲ್ ಕಲೆಕ್ಟರ್ !

ದಾವಣಗೆರೆ: ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹರಿಹರ ನಗರಸಭೆಯ ಬಿಲ್ ಕಲೆಕ್ಟರ್ ಮಂಜುನಾಥ ಎಸಿಬಿ ಬಲೆಗೆ ಬಿದ್ದವರು. ದಾವಣಗೆರೆಯ ರಾಘವೇಂದ್ರ ಎಂಬುವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ‌ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿಯೇ ಹಿಡಿಯಲಾಗಿದೆ.

ಹರಿಹರದ ಹರ್ಲಾಪುರದಲ್ಲಿ ರಾಘವೇಂದ್ರ ಎಂಬುವವರು ನಿವೇಶನ ಹೊಂದಿದ್ದರು. ಖಾತೆ ಬದಲಾವಣೆ ಹಾಗೂ ಕಂದಾಯ ಅಪ್ಡೇಟ್‌ಗಾಗಿ ಅರ್ಜಿ ಸಲ್ಲಿಸಿದ್ರು. ಇದಕ್ಕಾಗಿ ರೂ. 1.70 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಂಜುನಾಥ ಮುಂಗಡವಾಗಿ ರೂ. 1 ಲಕ್ಷ ಲಂಚ ಸ್ಚೀಕರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಹರಿಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By :
PublicNext

PublicNext

06/04/2022 04:51 pm

Cinque Terre

34.89 K

Cinque Terre

3

ಸಂಬಂಧಿತ ಸುದ್ದಿ