ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋಸ್ಟ್​​ ವೆಡ್ಡಿಂಗ್​ ಫೋಟೋ ಶೂಟ್​ ದುರಂತ: ವರ ಸಾವು, ವಧು ಸ್ಥಿತಿ ಚಿಂತಾಜನಕ!

ತಿರುವನಂತಪುರಂ: ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ವೇಳೆ ವರ ಬಂಡೆಯಿಂದ ಜಾರಿಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದ್ದು, ವಧುವಿನ ಸ್ಥಿತಿ ಕೂಡ ಚಿಂತಾಜನಕವಾಗಿದೆ.

ಕೇರಳದ ಕೋಯಿಕ್ಕೋಡ್ ಸಮೀಪದ ಕುಟ್ಟಿಯಾಡಿಯಲ್ಲಿ ಈ ಘಟನೆ ನಡೆದಿದೆ. ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ವರನಾಗಿದ್ದು, ಈತನ ಪತ್ನಿ ಕಾರ್ತಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್​​ 14ರಂದು ರೆಜಿಲ್​ ಮತ್ತು ಕಾರ್ತಿಕಾ ಮದುವೆಯಾಗಿತ್ತು. ಪೋಸ್ಟ್​​ ವೆಡ್ಡಿಂಗ್​ ಫೋಟೋಶೂಟ್​ಗಾಗಿ ಕುಟ್ಟಿಯಾಡಿ ನದಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನದಿಗೆ ಬಿದ್ದಿದ್ದಾರೆ.

ನದಿಗೆ ಬಿದ್ದ ಬಳಿಕ ಇಬ್ಬರ ಚೀರಾಟದ ಧ್ವನಿ ಕೇಳಿದ ಸ್ಥಳೀಯರು ದೌಡಾಯಿಸಿ ನದಿಗೆ ಹಾರಿ ಇಬ್ಬರನ್ನೂ ಹೊರತೆಗೆದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲೇ ರೆಜಿಲ್ ಕೊನೆಯುಸಿರೆಳೆದಿದ್ದಾನೆ. ಇತ್ತ ಅಸ್ವಸ್ಥ ಕಾರ್ತಿಕಾಳನ್ನು ಮಲಬಾರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Edited By : Vijay Kumar
PublicNext

PublicNext

05/04/2022 09:09 am

Cinque Terre

28.87 K

Cinque Terre

0

ಸಂಬಂಧಿತ ಸುದ್ದಿ