ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ್: ಕೆಜಿಎಫ್‌ನಲ್ಲಿ ವಕೀಲರ ಕಿತ್ತಾಟ-ಬೇಸರಗೊಂಡ ಸಾರ್ವಜನಿಕರು !

ಕೋಲಾರ್: ಕೆಜಿಎಫ್‌ನಗರದ ರಸ್ತೆ ಮಧ್ಯೆದಲ್ಲಿಯೇ ವಕೀಲರಿಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಕೀಲನ ಮೇಲೆ ವಕೀಲೆ ಚೇರ್ ಎಸೆದು ಹಲ್ಲೆಗೆ ಪ್ರಯತ್ನಿಸಿದ ಘಟನೆ ಇದಾಗಿದ್ದು ನ್ಯಾಯಾಲದ ಮುಂಭಾಗದಲ್ಲಿ ಹೈಡ್ರಾಮಾನೇ ನಡೆದು ಹೋಗಿದೆ.

ವೆನಿಲ್ಲಾ ಎಂಬ ವಕೀಲೆ ಬಾಬು ಎಂಬ ವಕೀಲನ ಮೇಲೆ ಚೇರ್ ಎಸೆದಿದ್ದಾರೆ. ಕಲ್ಲಿನಿಂದಲೂ ಹೊಡೆಯಲು ಯತ್ನಿಸಿದ್ದಾರೆ. ವಕೀಲರ ಈ ಕಿತ್ತಾಟದಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಕೀಲರ ಈ ಕಿತ್ತಾಟವನ್ನ ರಾಬರ್ಟಸನ್ ಪೇಟೆಯ ಪೊಲೀಸರು ನಿಯಂತ್ರಿಸಿದ್ದಾರೆ. ಆದರೆ ವಕೀಲರ ಈ ಕಚ್ಚಾಟಕ್ಕೆ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ.

Edited By : Manjunath H D
PublicNext

PublicNext

29/03/2022 07:46 pm

Cinque Terre

71.76 K

Cinque Terre

7