ಮಡಿಕೇರಿ: ಇಷ್ಟು ದಿನ ಜಾನುವಾರುಗಳ ಕೊಂದು ತಿನ್ನುತ್ತಿದ್ದ ಹುಲಿ ಇದೀಗ ಮನುಷ್ಯರ ಮೇಲೆ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಕೊಂದಿರುವ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬಿ ಬಾಡಗ ಗ್ರಾಮದಲ್ಲಿ ನಡೆದಿದೆ.
ಗಣೇಶ್ (29) ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿ. ಗ್ರಾಮದ ಅಯ್ಯಪ್ಪ ಎಂಬುವರ ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದ ಗಣೇಶ್ ಮೇಲೆ ಹುಲಿ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ಕೊಂದು ಹಾಕಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ.
ಒಂದು ವಾರದ ಹಿಂದೆಯಷ್ಟೇ ಇದೇ ಜಾಗದಲ್ಲಿ ಸುಬ್ಬಯ್ಯ ಎಂಬುವರ ಹಸುವನ್ನು ಹುಲಿ ಕೊಂದು ತಂದಿತ್ತು. ಇನ್ನು ಕಳೆದ ವರ್ಷವಷ್ಟೇ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ ನಿರಂತರ ದಾಳಿ ಮಾಡಿದ್ದ ಹುಲಿ ಮೂವರನ್ನು ಬಲಿ ಪಡೆದಿತ್ತು. ಬಳಿಕ ಸರ್ಕಾರದ ಆದೇಶದಂತೆ ಹುಲಿಯನ್ನು ಶೂಟ್ ಮಾಡಿ ಕೊಲ್ಲಲಾಗಿತ್ತು. ಇದೀಗ ಮತ್ತೊಂದು ಹುಲಿಯಿಂದ ವ್ಯಕ್ತಿ ಬಲಿಯಾಗಿರುವುದರಿಂದ ದಕ್ಷಿಣ ಕೊಡಗಿನ ಜನರು ಆತಂಕಗೊಂಡಿದ್ದಾರೆ.
PublicNext
29/03/2022 08:42 am