ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ 'ಮೈ ಭಿ ಖಾವೂಂಗಾ ತುಮ್ಕೋಬಿ ಖಿಲಾವೂಂಗಾ' ನಡಿಯುತ್ತಿದೆ: ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬೆಂಗಳೂರು: ಕರ್ನಾಟಕದಲ್ಲಿ 'ಮೆಬಿ ಕಾವೂಂಗಾ ತುಮ್ಕೋಬಿ ಕಿಲಾವೂಂಗಾ' ನಡಿಯುತ್ತಿದೆ ಎಂದು ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕೇಳಿ ಬಂದಿರುವ ಕಮಿಷನ್ ಆರೋಪ ವಿಚಾರವಾಗಿ ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, "ಈಶ್ವರಪ್ಪನವರು ಈ ಹಿಂದೆ ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಆಗುತ್ತಿದೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಸಿಎಂ ಹಾಗೂ ಅವರ ಕುಟುಂಬ ನಮಗೆ ಗೊತ್ತಿಲ್ಲದೆ ಅನುದಾನ ಹಂಚಿಕೆ ಮಾಡಿದ್ದಾರೆ ಎಂದು ಈಶ್ವರಪ್ಪ ದೂರು ನೀಡಿದ್ರು. ಈಗ ಗುತ್ತಿಗೆದಾರರು ಅವರ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ" ಎಂದರು.

"ಈ ಸರ್ಕಾರ ಶೇ. 40 ಪರ್ಷೆಂಟ್ ಸರ್ಕಾರ ಆಗಿದೆ. ಕರ್ನಾಟಕದಲ್ಲಿ ಮೈ ಭಿ ಖಾವೂಂಗಾ ತುಮ್ಕೋಬಿ ಖಿಲಾವೂಂಗಾ ನಡೀತಿದೆ. ಇದನ್ನು ತನಿಖೆ ಆಗಬೇಕು ಅಂತ ಹೇಳಿದ್ರು. ಈವರೆಗೂ ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಸ್ಪೀಕರ್ ಕೂಡ ಸಾರ್ವಜನಿಕ ಉಪಯೋಗ ಆಗುವ ಚರ್ಚೆ ಅಲ್ಲ ಎಂದು ಈ ಕುರಿತಾದ ನಿಲುವಳಿ ತಿರಸ್ಕಾರ ಮಾಡುತ್ತಾರೆ. ಶೇ.40 ಸರ್ಕಾರ ಏನು ಆಗುತ್ತಿಲ್ಲ ಅಂತ ಹೇಳಿದ್ದರು. ಇವರು ಚರ್ಚೆಗೆ ಹೆದರುತ್ತಾರೆ. ಸರ್ಕಾರ ಇದಕ್ಕೆ ಸಾಕ್ಷಿ ಕೇಳುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏನಿದು ಆರೋಪ?

ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಕೆ ಪಾಟೀಲ್ ಎಂಬುವವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದಿದ್ದು, ಸಚಿವ ಈಶ್ವರಪ್ಪ ಹಾಗೂ ಸಹವರ್ತಿಗಳು ಕಾಮಗಾರಿಯ ಬಾಕಿ ಬಿಲ್ ಮೊತ್ತ ನಾಲ್ಕು ಕೋಟಿ ಪಾವತಿಸಲು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Edited By : Vijay Kumar
PublicNext

PublicNext

28/03/2022 02:12 pm

Cinque Terre

42.21 K

Cinque Terre

14