ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆ ಮುಂದೆ ಬುಲ್ಡೋಜರ್ ನಿಲ್ಲುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರೇಪ್‌ ಆರೋಪಿ ಶರಣಾಗತಿ!

ಲಕ್ನೋ: ಬಿಜೆಪಿಯ ಯೋಗಿ ಆದಿತ್ಯನಾಥ್ ಅವರ ಪ್ರಚಾರದ ಮೂಲಕ ಉತ್ತರ ಪ್ರದೇಶದಲ್ಲಿ ಸದ್ದು ಮಾಡಿದ್ದ ಬುಲ್ಡೋಜರ್‌ಗಳು ಈಗ ಅಪರಾಧಿ ಮತ್ತು ದುಷ್ಕರ್ಮಿಗಳಲ್ಲಿ ಕಾನೂನಿನ ಭಯವನ್ನು ಮೂಡಿಸುತ್ತಿವೆ.

ಹೌದು. ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಇಂತಹ ಒಂದು ಪ್ರಕರಣ ವರದಿಯಾಗಿದ್ದು, ಬುಲ್ಡೋಜರ್ ಭಯದಿಂದ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗುವಂತೆ ಮಾಡಿದೆ.

ಮಾರ್ಚ್ 19 ರಂದು ಪ್ರತಾಪ್‍ಗಢ್ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಮಹಿಳೆ ಪತಿಯೊಂದಿಗೆ ಕಾಯುತ್ತಿದ್ದರು. ಈ ವೇಳೆ ಪತಿ ಮಹಿಳೆಯನ್ನು ಒಂಟಿಯಾಗಿ ಬಿಟ್ಟು ಚಹಾ ಖರೀದಿಸಲು ಹೋಗಿದ್ದರು. ಈ ವೇಳೆ ಆರೋಪಿ ಮಹಿಳೆಯ ಬಳಿಗೆ ಬಂದು ಕೀಲಿಯನ್ನು ನೀಡಿ, ಪಾರ್ಕಿಂಗ್ ಬಳಿ ಇರುವ ಸ್ವಚ್ಛ ಶೌಚಾಲಯಕ್ಕೆ ಹೋಗಿ ಬಳಸಬಹುದೆಂದು ತಿಳಿಸಿ ಆಕೆಗೆ ಕೀಲಿಯನ್ನು ನೀಡಿದ್ದಾನೆ. ನಂತರ ಹೊರಗೆ ನಿಂತು ಕಾಯುತ್ತಿದ್ದ ಆರೋಪಿ, ಮಹಿಳೆ ಶೌಚಾಲಯಕ್ಕೆ ಪ್ರವೇಶಿಸಿದ ಕೂಡಲೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದ.

ಮಹಿಳೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಆತ ತನ್ನ ಮನೆಯಲ್ಲಿ ಇಲ್ಲದ ಕಾರಣ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ಆತನನ್ನು ಹುಡುಕಲು ವಿಫಲವಾದ ಕಾರಣ, ಅವರು ಅವರ ಮನೆಯ ಹೊರಗೆ ಬುಲ್ಡೋಜರ್ ಅನ್ನು ನಿಲ್ಲಿಸಿದರು ಮತ್ತು ಆರೋಪಿಯು 24 ಗಂಟೆಗಳ ಒಳಗೆ ಶರಣಾಗದಿದ್ದರೆ, ಅವರ ಮನೆಯನ್ನು ನೆಲಸಮ ಮಾಡುವುದಾಗಿ ಅವರ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ್ದರು. ಪೊಲೀಸರು ನೀಡಿದ ಈ ಎಚ್ಚರಿಕೆ ಆರೋಪಿಯನ್ನು ಹುಡುಕಲು ಸರಿಯಾದ ಮಾರ್ಗ ತೋರಿಸಿದೆ. ಅತ ತಾನು ಇರುವ ಪ್ರದೇಶದ ಬಗ್ಗೆ ಮಾಹಿತಿ ನೀಡಿದ್ದರಿಂದ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿದ ಯೋಗಿ ಆದಿತ್ಯನಾಥ್ ಸರ್ಕಾರ ಅಕ್ರಮ ಕಟ್ಟಡಗಳೆಂದು ಬಹಳಷ್ಟು ಕಟ್ಟಡಗಳನ್ನು ಕೆಡವಿ ಹಾಕಿತ್ತು. ಯೋಗಿ ಈ ತೆರವು ಕ್ರಮಗಳನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿ ಬುಲ್ಡೋಜರ್ ಬಾಬಾ ಎಂದು ವ್ಯಂಗ್ಯವಾಡಿದ್ದರು. ಯೋಗಿ ಆದಿತ್ಯನಾಥ್ ಬುಲ್ಡೋಜರ್ ಅನ್ನು ಅಭಿವೃದ್ಧಿ ಹಾಗೂ ಶಕ್ತಿಯ ಸಂಕೇತ ಎಂದು ಬಿಂಬಿಸಿದ್ದರು.

Edited By : Vijay Kumar
PublicNext

PublicNext

25/03/2022 02:08 pm

Cinque Terre

33.04 K

Cinque Terre

5

ಸಂಬಂಧಿತ ಸುದ್ದಿ