ವಾಷಿಂಗ್ಟನ್: 25 ವರ್ಷದ ಮಹಿಳೆಯೊಬ್ಬರ ಮೇಲೆ ಪಿಟ್‌ಬುಲ್ ಡಾಗ್ ಮಾರಣಾಂತಿಕ ರೀತಿ ದಾಳಿ ನಡೆಸಿದ ಆಘಾತಕಾರಿ ಘಟನೆ ಅಮೆರಿಕದ ಕೊಲಂಬಿಯಾದಲ್ಲಿ ನಡೆದಿದೆ.
ಮಹಿಳೆಯು ಕೊಲಂಬಿಯಾದ ಕುಕುಟಾದ ಪ್ರಾಡೋಸ್ ಜಿಲ್ಲೆಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶೂಲೇಸ್‌ಗಳನ್ನು ಕಟ್ಟುತ್ತಿದ್ದಾಗ ನಾಯಿ ಆಕೆಯ ಮೇಲೆ ದಾಳಿ ಮಾಡಿದೆ. ಪಿಟ್‌ಬುಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಲಿಫ್ಟ್‌ಗೆ ಬರುತ್ತಾಳೆ. ಆದರೆ ಆಕೆಯನ್ನು ಬಿಡದ ಶ್ವಾನವು ಮಾರಣಾಂತಿಕ ದಾಳಿ ಮುಂದುವರೆಸಿದೆ. ಅಷ್ಟೇ ಅಲ್ಲದೆ ಆಕೆಯನ್ನು ಲಿಫ್ಟ್‌ನಿಂದ ಹೊರಗೆ ಎಳೆದೊಯ್ದ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂತಿಮವಾಗಿ ಸಂಬಂಧಿಯೊಬ್ಬರು ಮಹಿಳೆಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ವರದಿಯಾಗಿದೆ.
PublicNext
25/03/2022 08:02 am