ಬೆಳಗಾವಿ: ಗಿರಾಕಿಗಳ ವಿಚಾರದಲ್ಲಿ ವೇಶ್ಯೆಯರ ನಡುವೆ ಮಾರಣಾಂತಿಕ ಹೊಡೆದಾಟ ನಡೆದಿದೆ. ಇವರ ಕಿತ್ತಾಟ ನಿಲ್ಲಿಸಲು ಬಂದ ಪೊಲೀಸರೇ ಸುಸ್ತಾಗಿದ್ದಾರೆ.
ಬೆಳಗಾವಿಯ ಖಡೇಬಜಾರ್‌ನಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು ಅದರ ವಿಡಿಯೋ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.
ಖಡೇಬಜಾರ್‌ನಲ್ಲಿ ಗಿರಾಕಿ ಹುಡುಕುತ್ತಿದ್ದ ವೇಶ್ಯೆಯರು ಬೇರೆ ಏರಿಯಾದ ವೇಶ್ಯೆಯನ್ನು ಕಂಡಿದ್ದಾರೆ. 'ನನ್ನ ಏರಿಯಾದಲ್ಲಿ ನೀನ್ಯಾಕೆ ಬಂದೆ?' ಎಂದು ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಇವರಿಗೆ ಸರಿಯಾಗಿ ಪಾಠ ಕಲಿಸಿ ಪರಿಸ್ಥಿತಿ ಕಂಟ್ರೋಲ್‌ಗೆ ತಂದಿದ್ದಾರೆ. ಘಟನೆಯಲ್ಲಿ ಒಬ್ಬಳು ನಿತ್ರಾಣಗೊಂಡು ಬಿದ್ದಿರುವುದು ದೃಶ್ಯದಲ್ಲಿ ಕಾಣುತ್ತಿದೆ.
PublicNext
24/03/2022 01:47 pm