ಶಿರಸಿ: ಒಂದಲ್ಲ ಎರಡಲ್ಲ 3 ನಾಗರ ಹಾವುಗಳೊಂದಿಗೆ ಯುವಕ ಸ್ಟಂಟ್ ಮಾಡಲು ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ನಡೆದಿದೆ.
ಶಿರಸಿಯ ಮಾಜ್ ಸೈಯದ್ ಹಾವಿನ ದಾಳಿಗೆ ಗಾಯಗೊಂಡ ಯುವಕ. ಮಾಜ್ ಸೈಯದ್ ಮೇಲೆ ಹಾವು ದಾಳಿ ನಡೆಸಿದ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹೆಡೆ ಎತ್ತಿ ನಿಂತಿದ್ದ ಹಾವುಗಳ ಗಮನ ಸೆಳೆಯಲು ಯುವಕ ಮಾಜ್ ಸೈಯದ್ ಮುಂದಾಗಿದ್ದ. ಈ ವೇಳೆ ಕ್ಷಣ ಮಾತ್ರದಲ್ಲೇ ಯುವಕನ ಎಡಭಾಗದಲ್ಲಿದ್ದ ಹಾವು ದಾಳಿ ಮಾಡಿ ಮೊಣಕಾಲಿಗೆ ಕಚ್ಚಿದೆ. ಇದರಿಂದ ಗಾಬರಿಗೊಂಡಂತೆ ಕಂಡ ಆತ ಎದ್ದು ಹಾವಿನಿಂದ ಬಿಡಿಸಿಕೊಳ್ಳಲು ಮುಂದಾಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.
ಯುವಕನ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕಿ ಪ್ರಿಯಾಂಕಾ ಕದಂ, ಸೈಯದ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿಸಿದ್ದಾರೆ.
PublicNext
17/03/2022 04:19 pm