ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ತಿಂಗಳ ಕಂದನನ್ನು ಬಿಟ್ಟು 22ರ ಗೃಹಿಣಿ ನೇಣಿಗೆ ಶರಣು

ಚಾಮರಾಜನಗರ: ಕೌಟುಂಬಿಕ ಕಲಹದಿಂದ ಬೇಸತ್ತ ಗೃಹಿಣಿ ತನ್ನ 8 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ.

ದಿವ್ಯಾ (22) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ಹಾಲುಬಾಳು ಗ್ರಾಮದ ದಿವ್ಯಾ ಮೂರು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಆನಂದ್​ ಕಾಂಬ್ಳೆ ಅವರೊಂದಿಗೆ ಮದುವೆ ಮಾಡಿಕೊಂಡಿದ್ದರು. ಹನೂರು ತಾಲೂಕು ಹೂಗ್ಯಂ ಗ್ರಾ.ಪಂ. ಪಿಡಿಒ ಆಗಿರುವ ಆನಂದ್ ಕಾಂಬ್ಳೆ ಹೆಂಡತಿ, ಮಗುವಿನೊಂದಿಗೆ ಕೊಳ್ಳೇಗಾಲದಲ್ಲಿ ವಾಸಿಸುತ್ತಿದ್ದರು.

ಮದುವೆಯಾಗಿ ಕೆಲ ದಿನಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದ ಗಂಡ ಆ ಬಳಿಕ ತನ್ನ ವರಸೆ ಬದಲಿಸಿ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತ ದಿವ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಕೊಳ್ಳೇಗಾಲ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿರುವ ಪೊಲೀಸರು ಪತ್ನಿ ಆತ್ಮಹತ್ಯೆಗೆ ಶರಣಾದ ಬಳಿಕ ನಾಪತ್ತೆಯಾಗಿರುವ ಆನಂದ್​ಗಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Vijay Kumar
PublicNext

PublicNext

15/03/2022 03:29 pm

Cinque Terre

53.5 K

Cinque Terre

2

ಸಂಬಂಧಿತ ಸುದ್ದಿ