ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಮೀಟರ್ ಬಡ್ಡಿಗೆ ಬೇಸತ್ತು ವಿಡಿಯೋ ಮಾಡಿ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ

ಹಾಸನ : ಮೀಟರ್ ಬಡ್ಡಿ ಸಾಲದ ಕಿರುಕುಳಕ್ಕೆ ಬೇಸತ್ತ ವ್ಯಕ್ತಿಯೋರ್ವ ಸಾಯುವ ಮುನ್ನ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಹೌದು ಹಾಸನದ ಉದಯಗಿರಿಯ ನಿವಾಸಿ ಅಂಬರೀಶ್ ಭಾನುವಾರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಇನ್ನು ಸಾಯುವ ಮುನ್ನ ವಿಡಿಯೋ ಮಾಡಿರುವ ಅಂಬರೀಶ್ ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ, ತಿಂಗಳಿಗೆ 50%, 30%, 52% ಬಡ್ಡಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನರೇಂದ್ರ, ರಾಜಪ್ಪ, ಸತ್ಯಮಂಗಲದ ಜಗ ಎಂಬುವವರೊಂದಿಗೆ ಕೊರೊನಾ ಬರುವ ಮುಂಚೆಯೇ ವ್ಯವಹಾರ ಮಾಡಿದ್ದೇ ಅದಕ್ಕಾಗಿ ಎಲ್ಲರಿಗೂ ಚೆಕ್ ನೀಡಿದ್ದೇನೆ ಇದುವರೆಗೂ ಬಡ್ಡಿಯನ್ನು ಕೊಟ್ಟಿದ್ದೇನೆ.ಇನ್ನು ನನ್ನ ಇನ್ ವಾಯ್ಸ್, ಬ್ಯುಸಿನೆಸ್ ನೋಡಿ ಅವರು ಸಾಲ ಕೊಟ್ಟಿದ್ದರು.

ಈಗಾ ನನ್ನ ಹದಿನೆಂಟರಿಂದ ಇಪ್ಪತ್ತು ಚೆಕ್ , ದಾಖಲೆಗಳನ್ನು ಕೊಡುತ್ತಿಲ್ಲ.ಮೂರು ಲಕ್ಷ ಸಾಲಕ್ಕೆ ಬಡ್ಡಿ ಹದಿಮೂರು ಲಕ್ಷ ಆಗಿದೆ ಎಂದು ಎಲ್ಲರು ಕೇಸ್ ಹಾಕುತ್ತಿದ್ದಾರೆ ಎಂದು ಕಣ್ಣೀರಿಡುತ್ತಾ ವಿಡಿಯೋ ಮಾಡಿರುವ ಅಂಬರೀಶ್ ಕೊನೆಯುಸಿರೆಳೆದಿದ್ದಾರೆ.

ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

15/03/2022 12:10 pm

Cinque Terre

66.66 K

Cinque Terre

0