ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಂಗಂಡಿಯಲ್ಲಿ ಅಂಗಡಿಗಳ ಬೀಗ ಮುರಿದು ಹಣ ಕಳ್ಳತನ.!

ಯಾದಗಿರಿ : ಅಂಗಡಿಗಳನ್ನೇ ಟಾರ್ಗೆಟ್ ಮಾಡಿದ ಕಳ್ಳರ ಗ್ಯಾಂಗ್, ರಾತ್ರೋ ರಾತ್ರಿ ಹಣ ಎಗರಿಸಿ ಎಸ್ಕೇಪ್ ಆದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎರಡು ಅಂಗಡಿಗಳ ಬೀಗ ಮುರಿದು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಎಗರಿಸಿದ್ದಾರೆ. ಇನ್ನು ರಾಘವೇಂದ್ರ ಎಂಬುವವರ ಅಂಗಡಿಯಲ್ಲಿ 10 ಸಾವಿರ ರೂ. ಹಾಗೂ ಅಮೀನರೆಡ್ಡಿಯವರ ಅಂಗಡಿಯಲ್ಲಿ 5 ಸಾವಿರ ಹಣ ಕಳ್ಳತನವಾಗಿದೆ.

ಒಂದೇ ರಾತ್ರಿಯಲ್ಲೇ ಶಾಹಾಪುರ ಹಾಗೂ ಸುರಪುರ ತಾಲ್ಲೂಕಿನಲ್ಲಿ ನಾಲ್ಕೈದು ಅಂಗಡಿಗಳಲ್ಲಿ ಕ್ಳಳತನವಾಗಿದ್ದು, ಕಳ್ಳರ ಗ್ಯಾಂಗ್ ಒಂದು ಈ ಕೆಲಸ ಮಾಡುತ್ತಿದೆ ಎಂಬ ಮಾತು ಕೇಳಿ ಬರ್ತಿದೆ.

ಇನ್ನು ಈ ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Edited By : Nirmala Aralikatti
PublicNext

PublicNext

10/03/2022 05:21 pm

Cinque Terre

35.89 K

Cinque Terre

0

ಸಂಬಂಧಿತ ಸುದ್ದಿ