ಮುಂಬೈ: ಪುಣೆ ನಗರದ ಹೊರವಲಯದಲ್ಲಿರುವ ಲೋಣಿ ಕಾಳಭೋರನಲ್ಲಿ ಬುಧವಾರ ಸೆಪ್ಟಿಕ್ ಟ್ಯಾಂಕ್ ಒಂದನ್ನು ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೃತ ವ್ಯಕ್ತಿಯೊಬ್ಬರ ಪತ್ನಿಯು ಅಧಿಕಾರಿಗಳ ಗಂಭೀರ ಆರೋಪ ಮಾಡಿದ್ದಾರೆ.
ಲೋಣಿ ಕಾಳಭೋರನ ಕದಮವಾಕ್ ವಸ್ತಿಯಲ್ಲಿನ ವಸತಿ ಕಟ್ಟಡವೊಂದರಲ್ಲಿ ನಿನ್ನೆ (ಬುಧವಾರ) ಸೆಪ್ಟಿಕ್ ಟ್ಯಾಂಕ್‌ಅನ್ನು ಸ್ವಚ್ಛಗೊಳಿಸಲು ನಾಲ್ವರು ಕಾರ್ಮಿಕರು ಕೆಳಗಿಳಿದು ಸಾವನ್ನಪ್ಪಿದ್ದರು. ಈ ಘಟನೆ ಸಂಬಂಧ ಕಟ್ಟಡದ ಮಾಲೀಕರ ವಿರುದ್ಧ ದೂರು ನೀಡಿರುವ ಮೃತ ವ್ಯಕ್ತಿಯೋರ್ವನ ಪತ್ನಿ, "ಕಟ್ಟಡದ ಮಾಲೀಕರು ನನ್ನ ಪತಿಯನ್ನು ಸೆಪ್ಟಿಕ್ ಟ್ಯಾಂಕ್ ಒಳಗೆ ಪ್ರವೇಶಿಸುವಂತೆ ಒತ್ತಾಯಿಸಿದರು. ಅಷ್ಟೇ ಅಲ್ಲದೆ ಮಾಲೀಕರು ಯಾವುದೇ ರಕ್ಷಣಾ ಮತ್ತು ಸುರಕ್ಷತಾ ಸಾಧನಗಳನ್ನು ನೀಡಿಲ್ಲ" ಎಂದು ದೂರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗುರುವಾರ ಮಾಲೀಕರನ್ನು ಬಂಧಿಸಿದ್ದಾರೆ.
PublicNext
03/03/2022 08:58 pm