ಅರಕಲಗೂಡು: ದಲಿತ ವ್ಯಕ್ತಿಯೊವಬ್ಬರು ಕಬ್ಬಿನ ಹಾಲಿನ ಅಂಗಡಿ ಇಟ್ಟಿದ್ದಕ್ಕೆ ಅಂಗಡಿ ಚೆಲ್ಲಾಪಿಲ್ಲಿ ಮಾಡಿ ಹಲ್ಲೆಗೈಯಲಾಗಿದೆ. ಹಾಸನ ಜಿಲ್ಲೆ ಅರಕಲಗೂಡು ಸಮೀಪದ ರುದ್ರಪಟ್ಟಣ ಸಮೀಪ ಈ ಘಟನೆ ನಡೆದಿದೆ.
ರುದ್ರಪಟ್ಟಣ ಗ್ರಾಮದ ಚಂದ್ರ ಹಾಗೂ ಅವರ ಮಗ ನಿತಿನ್ ಎಂಬಾತರ ಮೇಲೆ ಗ್ರಾಮದ ಕೆಲವರು ಹಲ್ಲೆ ನಡೆಸಿದ್ದಾರೆ. ರಾಮನಾಥಪುರ-ಬೆಟ್ಟದಪುರ ರಸ್ತೆಯ ಪಕ್ಕದಲ್ಲಿ ಇವರು ಕಬ್ಬಿನ ಹಾಲಿನ ಅಂಗಡಿ ತೆರೆದಿದ್ದರು. ಸುಮಾರು ಆರು ತಿಂಗಳಿನಿಂದ ಚಂದ್ರ ಹಾಗೂ ಮಗ ನಿತಿನ್ ಇಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ನಿನ್ನೆ ಭಾನುವಾರ ಮಧ್ಯಾಹ್ನ ಏಕಾಏಕಿ ಅಂಗಡಿ ಬಳಿ ನುಗ್ಗಿದ ಸುನಿಲ್ ಎಂಬಾತ ಮತ್ತು ಇನ್ನೂ ಕೆಲವರು ಇಲ್ಲಿಂದ ಅಂಗಡಿ ತೆರವುಗೊಳಿಸಬೇಕೆಂದು ತಾಕೀತು ಮಾಡಿದ್ದಾರೆ. ನೀವು ತಯಾರಿಸಿದ ಕಬ್ಬಿನ ಜ್ಯೂಸ್ ನಾವೆಲ್ಲ ಕುಡಿಯಬೇಕಾ? ಎಂದು ಅಂಗಡಿ ಧ್ವಂಸ ಮಾಡಿದ್ದಾರೆ ಎಂದು ಚಂದ್ರ ಆರೋಪಿಸಿದ್ದಾರೆ.
ಈ ಬಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
28/02/2022 12:50 pm