ದಾಂಡೇಲಿ: ಕೆಲಸ ಮುಗಿಸಿ ಕಾಳಿ ನದಿಯಲ್ಲಿ ಕೈತೊಳೆಯಲು ಹೋದ ಯುವಕನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ನಡೆದಿದೆ.
ಪಟೇಲ ನಗರದ ನಿವಾಸಿ ಹರ್ಷದ್‌ಖಾನ್ ರಾಯಚೂರು (24) ಎಂಬಾತನನ್ನು ಸೋಮವಾರ ಸಂಜೆ ಮೊಸಳೆ ಎಳೆದುಕೊಂಡು ಹೋಗಿದೆ. ನದಿಯಲ್ಲಿದ್ದ ಮೊಸಳೆ ಏಕಾಏಕಿ ಯುವಕನ ಮೇಲೆ ದಾಳಿ ಮಾಡಿ, ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೋಲಿಸರು ಧಾವಿಸಿ ನದಿಯಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
PublicNext
07/02/2022 11:14 pm