ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗನ ವಯಸ್ಸಿನವನ ಜತೆ ಅಕ್ರಮ ಸಂಬಂಧ?- ತಾಯಿಯ ಗುಟ್ಟು ತಿಳಿದು ನೆತ್ತರು ಹರಿಸಿದ ಪಾಪಿ

ಕಲಬುರಗಿ: ಜಿಲ್ಲೆಯ ಬಬಲಾದ್- ಸಾವಳಗಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾದ ಫೋಟೋಗ್ರಾಫರ್ ಪ್ರಕರಣವು ರೋಚಕ ಟ್ವಿಸ್ಟ್ ಪಡೆದುಕೊಂಡಿದೆ.

ಶಿವಕುಮಾರ್ (25) ಹತ್ಯೆಯಾದ ಫೋಟೋಗ್ರಾಫರ್. ಕಳೆದ ತಿಂಗಳು (ಜನವರಿ) 25ರಂದು ಶಿವಕುಮಾರ್‌ನನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಕಲಬುರಗಿ ಜಿಲ್ಲೆ ವಾಡಿ ರೈಲ್ವೆ ಪೊಲೀಸರು ಪ್ರಮುಖ ಆರೋಪಿ ಮಹಾಂತೇಶ್ (21), ಬಸವರಾಜ್ (24), ಫಕಿರಪ್ಪ‌ ಸಲಗಾರ್ (25), ಸಿದ್ದಾರೋಡ ಕೋರವಾರ (26) ಹಾಗೂ ಅಶೋಕ್‌ ಜಮಾದರ್ (26)ನನ್ನು ಬಂಧಿಸಲಾಗಿದೆ.

ಆರೋಪಿ ಮಹಾಂತೇಶ್ ತಾಯಿ ಜೊತೆ ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಮಹಾಂತೇಶ್ ಸೋದರಮಾವ ಬಸವರಾಜ್ ಸಹಾಯ ಪಡೆದು ಶಿವಕುಮಾರ್‌ನನ್ನು ಹತ್ಯೆಗೆ ಪ್ಲಾನ್ ಮಾಡಿದ್ದ. ಅದರಂತೆ ಜನವರಿ 25ರಂದು ಶಿವಕುಮಾರ್‌ನನ್ನು ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಪ್ರಕರಣ ಮುಚ್ಚಿಹಾಕಲು ಶವವನ್ನ ರೈಲ್ವೆ ಹಳಿ ಮೇಲೆ ಬಿಸಾಕಿದ್ದರು.

ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಶಂಕೆ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Edited By : Nagesh Gaonkar
PublicNext

PublicNext

02/02/2022 12:36 pm

Cinque Terre

61.3 K

Cinque Terre

0

ಸಂಬಂಧಿತ ಸುದ್ದಿ