ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗಳ ಡಾ. ಸೌಂದರ್ಯ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಇಂದು ನಡೆಯ ಬೇಕಿದ್ದ ಸ್ಥಳ ಮಹಜರ್ ವಿಳಂಬವಾಗುತ್ತಿದೆ. ಮನೆ ಕೀ ಇಲ್ಲದ ಹಿನ್ನೆಲೆಯಲ್ಲಿ ನೀರಜ್ ಬಂದ ನಂತರವಷ್ಟೇ ಸ್ಥಳ ಮಹಜರ್ ಕಾರ್ಯ ಆರಂಭವಾಗಲಿದೆ.
ಸದ್ಯ ಸೌಂದರ್ಯ ಅಂತ್ಯಕ್ರಿಯೆ ಪೂಜಾ ಕಾರ್ಯಗಳಲ್ಲಿ ಇರುವ ನೀರಜ್ ಮತ್ತು ಕುಟುಂಬಸ್ಥರಿಗೆ ಹೈಗ್ರೌಂಡ್ ಪೊಲೀಸ್ರ ಸಮನ್ಸ್ ನೀಡಿದ್ದು, ಕುಟುಂಬಸ್ಥರು ಬಂದ ನಂತರ ಮಹಜರ್ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಹೈಗ್ರೌಂಡ್ಸ್ ಠಾಣೆ ಇನ್ಸ್‌ಪೆಕ್ಟರ್ ರಫೀಕ್ ಅಂಡ್ ಟೀಂ ಮನೆ ಬಳಿ ಬಂದು ವೀಕ್ಷಣೆ ನಡೆಸಿದರು. ಇಂದು ಸೌಂದರ್ಯ ಅವರ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಬರಲಿದ್ದು, ತಹಶೀಲ್ದಾರ್ ಅವರಿಂದ ಹೈ ಗ್ರೌಂಡ್ಸ್ ಪೊಲೀಸರಿಗೆ ರಿಪೋರ್ಟ್ ಹಸ್ತಾರವಾಗಲಿದೆ.
PublicNext
29/01/2022 11:38 am