ಮೈಸೂರು: ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿದನೆಂದು ಕೋಪಗೊಂಡ ಪತ್ನಿಯೊಬ್ಬಳು ತನ್ನ ಪತಿಯ ಮರ್ಮಾಂಗವನ್ನೇ ಹಿಸುಕಿ ಕೊಲೆಗೈದ ವಿಲಕ್ಷಣ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಬಸವರಾಜಪ್ಪ (42) ಕೊಲೆಯಾದ ವ್ಯಕ್ತಿಯಾಗಿದ್ದು, ಈತನನ್ನು ಪತ್ನಿ ನೇತ್ರಾವತಿ ಕೊಲೆ ಮಾಡಿದ್ದಾಳೆ. ರಾತ್ರಿ ಮದ್ಯ ಸೇವಿಸಿ ಬಂದ ಬಸವರಾಜಪ್ಪ ಪತ್ನಿ ನೇತ್ರಾವತಿ ಜೊತೆ ಗಲಾಟೆ ಆರಂಭಿಸಿದ್ದ. ಈ ವೇಳೆ ಕೋಪಗೊಂಡ ಪತ್ನಿ ಬಸವರಾಜಪ್ಪನ ಮರ್ಮಾಂಗಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಬಸವರಾಜಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ನಿ ನೇತ್ರಾವತಿಯನ್ನು ಬಂಧಿಸಿದ್ದಾರೆ. ಈ ಕುರಿತು ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
23/01/2022 04:28 pm