ಬೆಳಗಾವಿ: ಬೀದಿ ನಾಯಿ ಕಚ್ಚಿದ ಪರಿಣಾಮ ನಾಲ್ಕು ವರ್ಷದ ಕಂದಮ್ಮ ದಾರುಣವಾಗಿ ಮೃತ ಪಟ್ಟಿರುವ ಹೃದಯ ಕಲಕುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಮಲ್ಲಪ್ಪ ಮುತ್ತೂರ ಎಂಬ ನಾಲ್ಕು ವರ್ಷದ ಬಾಲಕಿ ಬೀದಿ ನಾಯಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
PublicNext
20/01/2022 10:48 am