ಚೆನ್ನೈ: ಕಿಡ್ನಾಪ್ ಆಗಿದ್ದೇನೆ ಎಂದು ತಂದೆಗೆ ನಕಲಿ ಸಂದೇಶ ಕಳುಹಿಸಿ ಮಗನೇ 30 ಲಕ್ಷ ರೂಪಾಯಿ ಬೇಡಿಕೆ ಇಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.
ಪಿ.ಕೃಷ್ಣಪ್ರಸಾದ್ (24) ಕಿಡ್ನಾಪ್ ನಾಟಕವಾಡಿದ ಯುವಕ. ತಂದೆಗೆ ಸಂದೇಶ ಕೂಡ ಕಳಿಸಿ 30 ಲಕ್ಷ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದ.
ಕೃಷ್ಣಪ್ರಸಾದ್ ತಂದೆ ಪೆನ್ಸಿಲಾಯಾ ಉದ್ಯಮಿ ಆಗಿದ್ದಾರೆ. ಮಗ ಕಾಣೆ ಆಗಿರೋದ್ರ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರು. ಮಸೇಜ್ ಬಂದ ಪೋನ್ ಲೋಕೇಷನ್ ಮೇಲೇನೆ ಪೊಲೀಸರು ಕೃಷ್ಣಪ್ರಸಾದ್ ನನ್ನ ಸಿಕಂದರಬಾದ್‌ನಲ್ಲಿ ಪತ್ತೆ ಹಚ್ಚಿದ್ದಾರೆ.ತಂದೆಯ ಒತ್ತಾಯದ ಮೇರೆಗೆ ಬೈದು ಬುದ್ದಿ ಹೇಳಿ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟುಕಳುಹಿಸಿದ್ದಾರೆ.
PublicNext
19/01/2022 10:36 pm