ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ಮೇಲೆಯೇ ಗ್ಯಾಂಗ್‌ರೇಪ್, ಗುಪ್ತಾಂಗಕ್ಕೆ ಸಿಗರೇಟ್ ಹಚ್ಚಿದ ಪತಿ: ಐವರ ಬಂಧನ

ಭೋಪಾಲ್: 32 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಮತ್ತು ಆತನ ನಾಲ್ವರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

'ಪತಿ ಹಾಗೂ ಆತನ ನಾಲ್ವರ ಸ್ನೇಹಿತರು ನನ್ನ ಮೇಲೆ ಅಸ್ವಾಭಾವಿಕ ಲೈಂಗಿಕತೆ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೆ ಪತಿಯು ಸಿಗರೇಟ್ ಸೇದಿ ನನ್ನ ಗುಪ್ತಾಂಗಕ್ಕೆ ಹಚ್ಚಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ' ಎಂದು ಮಹಿಳೆ ದೂರಿದ್ದಾಳೆ.

ಸಂತ್ರಸ್ತ ಮಹಿಳೆಯು ಛತ್ತೀಸ್‌ಗಢ ಮೂಲದವಳಾಗಿದ್ದು, ಇಂದೋರ್ ಮೂಲದ ವ್ಯಕ್ತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾಗಿದ್ದಳು. ಬಳಿಕ ಇಬ್ಬರೂ ವಿವಾಹವಾಗಿದ್ದರು. ಆದರೆ ವ್ಯಕ್ತಿ ಆಕೆಯನ್ನು ನವೆಂಬರ್ 2019 ಮತ್ತು ಅಕ್ಟೋಬರ್ 2021ರ ನಡುವೆ ಇಂದೋರ್‌ನ ಶಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್‌ಹೌಸ್‌ನಲ್ಲಿ ಇರಿಸಿದ್ದ. ಈ ವೇಳೆ ಗೆಳೆಯರೊಂದಿಗೆ ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಫಾರ್ಮ್‌ಹೌಸ್‌ನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Edited By : Vijay Kumar
PublicNext

PublicNext

17/01/2022 07:23 pm

Cinque Terre

33.12 K

Cinque Terre

0

ಸಂಬಂಧಿತ ಸುದ್ದಿ