ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗಳೂರು ಬಳಿ ಭೀಕರ ಅಪಘಾತಕ್ಕೆ ಚಾಲಕ ನಿದ್ರೆಗೆ ಜಾರಿದ್ದೇ ಕಾರಣ...!

ದಾವಣಗೆರೆ: ಅವ್ರೆಲ್ಲಾ ನಿದ್ರೆ ಮಾಡುತ್ತಿದ್ದರು. ಚಾಲಕನು ವೇಗವಾಗಿ ಹೊಸಪೇಟೆಗೆ ಹೋಗುವ ಧಾವಂತದಲ್ಲಿದ್ದ. ಬೆಂಗಳೂರಿನಿಂದ ಹೊಸಪೇಟೆಗೆ ಇಂಡಿಕಾ ಕಾರಿನಲ್ಲಿ ಏಳು ಮಂದಿ ಪ್ರಯಾಣ ಮಾಡುತ್ತಿದ್ದರು. ಆದ್ರೆ, ವಿಧಿಯಾಟವೇ ಬೇರೆ ಆಗಿತ್ತು. ಮಕರ ಸಂಕ್ರಮಣ ಹಬ್ಬದ ಸಂಭ್ರಮದಲ್ಲಿ ಮನೆ ಮಂದಿ ಇದ್ದರೆ, ಇಲ್ಲಿ ನಡೆದಿದ್ದೇ ಬೇರೆ.

ಹೌದು. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಾನನಕಟ್ಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಏಳು ಮಂದಿ ಬಲಿಯಾಗಿದ್ದಾರೆ. ಬೆಳ್ಳಂಬೆಳಿಗ್ಗೆ ಆದ ಈ ಅಪಘಾತದಲ್ಲಿ ಆರು ಜನರು ಸ್ಥಳದಲ್ಲಿ ಕೊನೆಯುಸಿರೆಳೆದರೆ, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಚಾಲಕ ನಿದ್ರೆಗೆ ಜಾರಿದ್ದೇ ಈ ದುರ್ಘಟನೆಗೆ ಕಾರಣ. ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ.

ಮೃತರು ಎಲ್ಲಿಯವರು...?

ಯಾದಗಿರಿ ಜಿಲ್ಲೆಯ ನಾಲ್ವರು, ವಿಜಯಪುರದ ಒಬ್ಬರು ಮತ್ತು ವಿಜಯಪುರದ ಇಬ್ಬರು ಮೃತಪಟ್ಟವರು. ಯಾದಗಿರಿ ಜಿಲ್ಲೆಯ ಶಹಪೂರದ ಮಲ್ಲನಗೌಡ, ಸಂತೋಷ್, ಸಂಜೀವ್, ಜೈಭೀಮ್, ವಿಜಯಪುರ ಜಿಲ್ಲೆಯ ತಾಳಿಕೋಟೆಯ ರಘು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದೇಶ್, ಕೂಡ್ಲಿಗಿ ತಾಲೂಕಿನ ಇಚಲಬೊಮ್ಮನಹಳ್ಳಿಯ ವೇದಮೂರ್ತಿ ಅಸುನೀಗಿದವರು. ಎಲ್ಲಾ ಮೃತದೇಹಗಳನ್ನು ಜಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Edited By : Shivu K
PublicNext

PublicNext

14/01/2022 11:43 am

Cinque Terre

89.29 K

Cinque Terre

0

ಸಂಬಂಧಿತ ಸುದ್ದಿ