ಹಾವೇರಿ: ವಿಕೇಂಡ್ ಕರ್ಪ್ಯೂ ಇರೋದನ್ನೆ ಬಂಡವಾಳ ಮಾಡಿಕೊಂಡ ದುಷ್ಕರ್ಮಿಯೊಬ್ಬ ಪೆಟ್ರೋಲ್ ಸುರಿದು ಬ್ಯಾಂಕ್ ಗೆ ಬೆಂಕಿಗೆ ಹಚ್ಚಿದ್ದಾನೆ. ಹೌದು , ಲೋನ್ ಕೊಡಲಿಲ್ಲಾ ಎಂಬ ಸಿಟ್ಟಿಗೆ ವ್ಯಕ್ತಿಯೊಬ್ಬ ಬ್ಯಾಂಕ್ ಗೆ ಬೆಂಕಿ ಇಟ್ಟಿದ್ದಾನೆ. ಬೆಂಕಿ ಹಾಕುವಾಗಲೇ ಖತರ್ನಾಕ ಪಾಪಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ.
ಈ ದುಷ್ಕೃತ್ಯ ಕಂಡು ರೊಚ್ಚಿಗೆದ್ದ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಹೊಡೆದು ನಂತರ ಪೋಲಿಸರಿಗೆ ಒಪ್ಪಿಸಿದ್ದಾರೆ.ರಟ್ಟಿಹಳ್ಳಿ ಮೂಲದ ವಾಸಿಂ ಮುಲ್ಲಾ 33,ಬೆಂಕಿ ಹಚ್ಚಿದ ಭೂಪ ಬೆಂಕಿಯ ಕೆನ್ನಾಲಿಗೆಗೆ ಕೆನರಾ ಬ್ಯಾಂಕ್ ಒಳಗೆ ಸುಟ್ಟ ಕರಕಲಾಗಿದೆ.
ಬ್ಯಾಂಕಿನ ಕಿಟಕಿ ಗ್ಲಾಸ್ ಒಡೆದು ಒಳಗೆ ಪೆಟ್ರೋಲ್ ಎಸೆದು ಬೆಂಕಿ ಹಾಕಿದ್ದರಿಂದ ಐದು ಕಂಪ್ಯೂಟರ್,ಪಾಸಬುಕ್ ಮತ್ತು ಕ್ಯಾಸ್ ಮಷಿನ್,ಕ್ಯಾಸ್ ಕೌಂಟರ್,ಪರ್ನಿಚರ್, ಬ್ಯಾಂಕ್‌ನ ವೈಯರಿಂಗ್ ಹಾಗೂ ಇತರೆ ವಸ್ತುಗಳು ಸುಟ್ಟ ಭಸ್ಮವಾಗಿದೆ.
ಒಟ್ಟು 13-15 ಲಕ್ಷ ಮೌಲ್ಯದ ಬ್ಯಾಂಕ್ ನ ಬೆಲೆಬಾಳುವ ವಸ್ತುಗಳು ಹಾಳಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,
ಕಾಗಿನೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/01/2022 12:29 pm