ಬೆಂಗಳೂರು : ರೈಲಿನಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯೊಬ್ಬರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಎನ್.ಸಿ.ಬಿ ಬೆಂಗಳೂರು ವಲಯ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಇನ್ನು ಈ ಖತರ್ನಾಕ್ ಲೇಡಿ ಮಕ್ಕಳ ಸೆರಾಲಾಕ್ ಪ್ಯಾಕೇಟ್ ನಲ್ಲಿ ಡ್ರಗ್ಸ್ ಇಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ ಎನ್.ಸಿ.ಬಿ ಅಧಿಕಾರಿಗಳು 1.50 ಕೋಟಿ ಮೌಲ್ಯದ 1 ಕೆಜಿ ಮೆಥೊಪಟೊಮೈನ್ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಸೆರಾಲಾಕ್ ಬೇಬಿ ಕಾರ್ಟೂನ್ ಎರಡು ಬಾಕ್ಸ್ ನಲ್ಲಿ ಮಹಿಳೆ ಮಾದಕವಸ್ತು ಇಟ್ಟಿದ್ದಳು. ಇನ್ನು ಗಂಭೀರ ವಿಚಾರ ಎಂದರೆ ಮಾದಕವಸ್ತುಗಳಲ್ಲೆ ಮೆಥೊಪಟೊಮೈನ್ ತುಂಬಾ ಅಪಾಯಕಾರಿ, ನಿಷೇಧಿತ ಡ್ರಗ್ ಆಗಿರುವ ಮೆಥೊಪಟೊಮೈನ್ ಮೆದುಳಿನ ನರ ಹಾಗೂ ಹಾರ್ಟ್ ಅಟ್ಯಾಕ್, ಮೆಮೊರಿ ಲಾಸ್ ಮುಂತಾದ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ.
PublicNext
08/01/2022 12:21 pm