ಚೆನ್ನೈ:ಇಲ್ಲಿಯ ವಿಮಾನ ನಿಲ್ದಾಣದಲ್ಲಿ 1,364 ಜೀವಂತ ನಕ್ಷತ್ರ ಆಮೆಗಳನ್ನ ಕಸ್ಟಮ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಥರ್ಮಕೋಲ್ ಬಾಕ್ಸ್ ನಲ್ಲಿದ್ದ ಈ ಆಮೆಗಳನ್ನ ಮೊದಲು ಏಡಿ ಅಂತಲೇ ತಿಳಿದ್ದರು.ಆದರೆ ಬಾಕ್ಸ್ ಓಪನ್ ಮಾಡಿದ ಬಳಿಕವೇ ಈ ಸತ್ಯ ಬಯಲಾಗಿದೆ.
ನಕ್ಷತ್ರ ಆಮೆಗಳನ್ನ ಮಲೆಷಿಯಾಗೆ ಕಳ್ಳ ಸಾಗಣೆ ಮಾಡಲೆಂದೇ ಇಲ್ಲಿಗೆ ತರಲಾಗಿತ್ತು ಅಂತಲೇ ಹೇಳಲಾಗಿದೆ. ಮೀನಂಬಾಕ್ಕಂ ನಲ್ಲಿರೋ ಏರ್ ಕಾರ್ಗೋ ರಪ್ತು ಶೆಡ್‌ನಲ್ಲಿಯೇ ಈ ಆಮೆಗಳು ಇದ್ದವು. ಅನುಮಾನ ಬಂದು ಕಸ್ಟಮ್ ಅಧಿಕಾರಿಗಳು ಬಾಕ್ಸ್ ಚೆಕ್ ಮಾಡಿದ್ದಾರೆ. ಆಗಲೇ ಈ ನಕ್ಷತ್ರ ಆಮೆಗಳು ಸಿಕ್ಕಿವೆ.
PublicNext
05/01/2022 08:14 pm