ಮುಂಬೈ: 'ಬುಲ್ಲಿ ಬಾಯ್' ಆ್ಯಪ್‌ನಲ್ಲಿ ಮಹಿಳಾ ವೈದ್ಯರ ಫೋಟೋ ಹಾಕಿ ಹರಾಜು ಹಾಕಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಸೆಲ್ ಪೊಲೀಸರು ಬೆಂಗಳೂರಿನ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ.
ಪೊಲೀಸರು ಬಂಧಿತನ ವಿರುದ್ಧ ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಯ ವಯಸ್ಸನ್ನು ಹೊರತುಪಡಿಸಿ ಉಳಿದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಮುಂಬೈ ಪೊಲೀಸರು ಗಿಟ್‌ಹಬ್ ಪ್ಲಾಟ್‌ಫಾರ್ಮ್ ಹೋಸ್ಟ್ ಮಾಡಿದ 'ಬುಲ್ಲಿ ಬಾಯ್' ಅಪ್ಲಿಕೇಶನ್‌ನಲ್ಲಿ ಮಹಿಳಾ ವೈದ್ಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ ಹರಾಜು ಹಾಕಲಾಗಿದೆ ಎಂಬ ದೂರಿನ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
PublicNext
04/01/2022 08:54 am