ತಂಜಾವೂರು:ಬ್ಯಾಂಕ್ ಲಾಕರ್ ನಲ್ಲಿದ್ದ 500 ಕೋಟಿ ಬೆಲೆ ಬಾಳುವ ಪಚ್ಚೆ ಮತ್ತು ಹರಳು ಇರೋ ವಿಶೇಷ ಶಿವಲಿಂಗವನ್ನ ಪೊಲೀಸರು ಈಗ ವಶಪಡಿಸಿಕೊಂಡಿದ್ದಾರೆ.
500 ಗ್ರಾಮ್ ಭಾರ ಇರೋ ಈ ಶಿವಲಿಂಗ 8 ಸೆಂಟಿಮೀಟರ್ ಉದ್ದ ಇದೆ. ತಿರುವರೂರು ಜಿಲ್ಲೆಯ ತಿರುಕ್ಕುವಲೈ ಅಲ್ಲಿರೋ ದೇವಸ್ಥಾನದ ಶಿವಲಿಂಗ ಇದಾಗಿದೆ ಅಂತಲೇ ಹೇಳಲಾಗಿದೆ.
ದಾಖಲೆಗಳೇ ಇಲ್ಲದ ಈ ಶಿವಲಿಂಗವನ್ನ ಲಾಕರ್ ನಲ್ಲಿಟ್ಟಿದ್ದ ವ್ಯಕ್ತಿ ಎನ್.ಎಸ್.ಅರುಣ್ ಭಾಸ್ಕರ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ನಗರದ ಮನೆಯೊಂದರಲ್ಲಿ ಹಳೆ ದೇವಾಲಯಗಳ ವಿಗ್ರಹದ ಮಾರಾಟ ಜಾಲ ನಡೀತಿದೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದರ ಆಧಾರದ ಮೇಲೆ ನಡೆದ ದಾಳಿಯಲ್ಲಿಯೇ ಈ ವಿಷಯ ಬೆಳಕಿಗೆ ಬಂದಿದೆ.
PublicNext
02/01/2022 04:50 pm