ಚಾಮರಾಜನಗರ:ಪತಿಯ ಪಾರ್ಥೀವ ಶರೀರ ಪಡೆಯಲು ಪತ್ನಿ ಮತ್ತು ಎರಡನೇ ಪತ್ನಿ ಕಿತ್ತಾಡಿಕೊಂಡ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಮೃತ ವ್ಯಕ್ತಿ ವೃತ್ತಿಯಲ್ಲಿ ವಕೀಲರಾಗಿದ್ದರು. ಪಾಪಶೆಟ್ಟಿ ಅನ್ನೋ ಇವ್ರು ದೊಡ್ಡತುಪೂರು ಗ್ರಾಮದ ನಿವಾಸಿ.ಮಹದೇವಮ್ಮ ಅನ್ನೋರ ವಿವಾಹ ಆಗಿದ್ದರು. ಎರಡನೇ ಪತ್ನಿ ನಿಮಿತಾ ಅನ್ನೋರನ್ನ ಮದುವೆ ಅವರ ಜೊತೆಗೇನೆ ಪಾಪಶೆಟ್ಟಿ ವಾಸ ಮಾಡ್ತಿದ್ದರು.
ಆದರೆ ಈಗ ಪಾಪಶೆಟ್ಟಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೊದಲ ಪತ್ನಿ ಇದು ಸಹಜ ಸಾವಲ್ಲ. ಕೊಲೆ ಅಂತಲೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಹಾಗಾಗಿಯೇ ಪೊಲೀಸರು ಶವಪರೀಕ್ಷೆನೂ ನಡೆಸಿದ್ದಾರೆ. ಈ ವೇಳೆನೆ ಪಾರ್ಥೀವ ಶರೀರ ಪಡೆಯಲು ನಾಮುಂದು ತಾಮುಂದು ಅಂತಲೇ ಪತ್ನಿಯರು ಮಹದೇವಮ್ಮ ಮತ್ತು ನಿಮಿತಾ ಕಿತ್ತಾಡಿಕೊಂಡಿದ್ದಾರೆ. ಏನ್ ಹೇಳಿದ್ರೂ ಸರಿ ಹೋಗೇದೆ ಇದ್ದಾಗ, ಪಾರ್ಥೀವ ಶರೀರವನ್ನ ಶವಾಗಾರಕ್ಕೆ ಪೊಲೀಸರು ರವಾನಿಸಿದ್ದಾರೆ.
ತಮ್ಮ ತಮ್ಮಲ್ಲಿಯೇ ಎಲ್ಲವನ್ನೂ ಇತ್ಯರ್ಥ ಮಾಡಿಕೊಂಡಿದ್ದಾರೆ. ಅದಕ್ಕೇನೆ ಪೊಲೀಸರು ಪಾಪಶೆಟ್ಟಿ ಅವರ ಪಾರ್ಥೀವ ಶರೀರವನ್ನ 2 ದಿನದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
PublicNext
31/12/2021 02:44 pm