ರೋಮ್:ಕ್ರಿಸ್ ಮಸ್ ಹಬ್ಬ.ಅದನ್ನ ಅಷ್ಟೇ ಚೆಂದಗೆ ಆಚರಿಸಿದ್ದರು. ಈ ಹಬ್ಬದ ದಿನ ಪತಿ ಲೈಂಗಿಕ ಆಸಕ್ತಿಯನ್ನ ಪತ್ನಿ ಎದುರು ಹೇಳಿಕೊಂಡಿದ್ದ.ಆಕೇನೂ ಓಕೆ ನೋ ಪ್ರಾಬ್ಲಂ ಅಂತ ಹೇಳಿದ್ದಳು. ಹಾಗೆ ಹೇಳಿದ್ದ ಪತ್ನಿಗೆ 61 ವರ್ಷ. ಪತಿಗೆ 80 ವರ್ಷ. ಆದರೆ ಪತಿಯ ಈ ಆಸಕ್ತಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.ಬನ್ನಿ ಹೇಳ್ತೀವಿ.
ಇಳಿ ವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಮತ್ತು ಲೈಂಗಿಕ ಕ್ರಿಯೆಗೆ ದೇಹವೇ ಒಪ್ಪೋದಿಲ್ಲ. ಆದರೆ ಪತಿ ವಿಟೋ ಕಂಗಿನಿ ವಯಾಗ್ರ ಮಾತ್ರೆ ತೆಗೆದುಕೊಂಡು ರೆಡಿ ಆಗಿಯೇ ಕುಳಿತು ಬಿಟ್ಟಿದ್ದ. ಪತ್ನಿ ನತಾಲಿಯಾ ಕೈರೋ ಚೋಕ್ ಕೋಣೆಯೊಳಗೆ ಬಂದಿದ್ದಾಳೆ.ಎಲ್ಲವೂ ಆ ಮೇಲೆ ಜೆಸ್ಟ್ ವೇಟ್ ಅಂದಿದ್ದಾಳೆ. ಅಷ್ಟೇ ನೋಡಿ. ಇಬ್ಬರ ನಡುವೆ ಜಗಳ ಶುರು ಆಗಿ ಬಿಟ್ಟಿದೆ.
ಕೋಪಗೊಂಡ ಪತಿ ಪಕ್ಕದಲ್ಲಿಯೇ ಇದ್ದ ಚಾಕುವಿನಿಂದ ಪತ್ನಿಯ ಎದೆಗೆ ಚುಚ್ಚಿದ್ದಾನೆ. ದೇಹದ ಇತರ ಭಾಗಕ್ಕೂ ಚುಚ್ಚಿ ಕೊಂದೇ ಬಿಟ್ಟಿದ್ದಾನೆ. ಆದರೆ ಮರು ದಿನ ಏನೂ ಆಗಿಯೇ ಇಲ್ಲ ಅಂತಲೇ ಓಡಾಡಿದ್ದಾನೆ. ಆದರೆ ಅದೇನ್ ಆಯಿತೋ ಏನೋ.
ಪಕ್ಕದ ಮನೆಯವರಿಗೆ ತನ್ನ ಪತ್ನಿ ಸಾಯಿಸಿದ ವಿಷಯವನ್ನ ತಿಳಿಸಿ ಪೊಲೀಸರಿಗೆ ಹೇಳಿ ಅಂತಲೂ ಕೇಳಿಕೊಂಡಿದ್ದಾರೆ.
ಪೊಲೀಸರು ಬಂದು ಎಲ್ಲವನ್ನೂ ಪರಿಶೀಲಿಸಿದ್ದಾರೆ. ಸ್ಥಳದಲ್ಲಿಯೇ ಇದ್ದ ಚಾಕುವನ್ನ ತೆಗೆದುಕೊಂಡು ಹೋಗಿದ್ದಾರೆ. ಆರೋಪಿ ಯನ್ನೂ ಬಂಧಿಸಿದ್ದಾರೆ. ಪ್ರಕರಣವನ್ನೂ ಪೊಲೀಸರು ದಾಖಲಿಸಿದ್ದಾರೆ.
PublicNext
30/12/2021 02:13 pm