ಬೆಂಗಳೂರು:ಹೊಸೂರ ರೋಡ್ ಸಿಗ್ನಲ್ ಬಳಿ ನಡೆದ ಅರ್ಚನಾ ರೆಡ್ಡಿ ಮರ್ಡರ್ ಕೇಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೆಗೆದುಕೊಳ್ಳುತ್ತಲೇ ಇದೆ. ಇಲ್ಲಿವರೆಗೂ ಒಂದಿದ್ದರೇ ದಿನ ದಿನೇ ಈ ಕೇಸ್ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳೇ ಹೊರ ಬೀಳ್ತಿವೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಈಗಾಗಲೇ ಅರ್ಚನಾ ರೆಡ್ಡಿ ಎರಡನೇ ಪತಿ ನವೀನ್ ಹಾಗೂ ಆರೋಪಿ ಅನೂಪ್‌ನನ್ನ ಬಂಧಿಸಿದ್ದಾರೆ.
ವಿಚಾರಣೆ ವೇಳೆ ಇವರು ಸ್ಪೋಟಕ ಮಾಹಿತಿಯನ್ನೆ ಹೊರ ಹಾಕಿದ್ದಾರೆ.ಆರೋಪಿ ನವೀನ್ ಮಗಳಿಂದಲೇ ಎಲ್ಲ ಮಾಹಿತಿಯನ್ನ ಪಡೆಯುತ್ತಿದ್ದ ಎನ್ನಲಾಗಿದೆ. ಅರ್ಚನಾ ರೆಡ್ಡಿ ಪತಿ ನವೀನ್ ಪತ್ನಿ ಬಿಟ್ಟು ಅರ್ಚನಾ ಮಗಳು ಯುವಿಕಾ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗುತ್ತಿದೆ.
PublicNext
29/12/2021 02:41 pm