ಬೆಂಗಳೂರು: ಫ್ರೀಡ್ಜ್ ತುಂಬಾ ಚೆನ್ನಾಗಿದೆ 15 ಸಾವಿರಕ್ಕೆ ಖರೀದಿಸ್ತೇನೆ ಮೊದಲು ಕ್ಯೂಆರ್ ಕೋಡ್ ಕಳುಹಿಸಿ ಅಂತಾ ಸ್ಕ್ಯಾನ್ ಮಾಡಿ ಎಂದು ಹೇಳಿದ್ದ ಖದೀಮನೊಬ್ಬ ಮಹಿಳೆಗೆ 78 ಸಾವಿರು ರೂಪಾಯಿ ಪಂಗನಾಮ ಹಾಕಿರೋ ಘಟನೆ ಈಗ ಬೆಳಕಿಗೆ ಬಂದಿದೆ.
ನಂತರ ಕ್ಯೂ ಆರ್ ಕೋಡ್ ಸ್ಕಾನ್ ಮಾಡಿದಾಗ ಅಕೌಂಟ್ ನಿಂದ 5 ರೂ. ಕಟ್ ಅಗಿ ತಕ್ಷಣ ರಿಫಂಡ್ ಅಗುತ್ತೆ ಎಂದಿದ್ದ ಆ 5 ರೂಪಾಯಿಯನ್ನ ಮರಳಿ ಮಹಿಳೆಯ ಅಕೌಂಟ್ ಗೆ ಕಳುಹಿಸಿ ನಂಬಿಸ್ತಾನೆ. ಮತ್ತೊಮ್ಮೆ ಕ್ಯೂಆರ್ ಕೊಡ್ ಕಳುಹಿಸಿ 15 ಸಾವಿರ ಹಾಕಿ ಒಟ್ಟು 30 ಸಾವಿರ ನಿಮ್ಮ ಖಾತೆಗೆ ಬರುತ್ತೆ ಎಂದು ಆ ಮಹಿಳೆಗೆ ಹೆಳ್ತಾನೆ.
ಅದನ್ನೆ ನಂಬಿಕೊಂಡವಳು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ 15 ಸಾವಿರ ಹಣ ಹಾಕಿಯೆ ಬಿಡುತ್ತಾರೆ. ನಂತರ ಹಣ ಬರದೆ ಇರುವುದನ್ನ ನೋಡಿ ಮತ್ತೆ ಅವನಿಗೆ ಕರೆ ಮಾಡಿದಾಗ ದೊಡ್ಡ ಮೊತ್ತ ಅಲ್ವಾ ಇನ್ನೋಮ್ಮೆ ಸ್ಕ್ಯಾನ್ ಮಾಡಿ ಎಂದು ಮತ್ತೆ ಹಣ ಪಡೆಯುತ್ತಾನೆ.
ಹೀಗೆ ಕೊಟ್ಟ ಹಣ ಮರಳಿ ಪಡೆಯಲು ಹೋಗಿ 78 ಸಾವಿರ ರೂಪಾಯಿ ಪಂಗನಾಮ ಹಾಕಿಸಿಕೊಂಡಿರು ಆ ಮಹಿಳೆ ಸದ್ಯ ಆರೋಪಿ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
PublicNext
29/12/2021 02:21 pm