ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ?

ಕಲಬುರಗಿ: ಕಲಬುರಗಿ ನಗರದ ಕರುಣೇಶ್ವರ ಬಡಾವಣೆಯ ಡಾ ಜಂಪಾ ಕ್ಲಿನಿಕ್‌ನಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇಟಗಾ ಗ್ರಾಮದ ನಾಗಮ್ಮ ಬಾಗೋಡಿ (45) ಮೂರು ದಿನದ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಡಾ ಜಂಪಾ ಕ್ಲಿನಿಕ್‌ನಲ್ಲಿಯೇ ನಾಗಮ್ಮ ಅವರು ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಎರಡನೇ ಬಾರಿ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ನಾಗಮ್ಮ ಸ್ಥಿತಿ ಗಂಭೀರವಾಗಿದೆ. ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ನಾಗಮ್ಮಳನ್ನು ಡಾ.ಜಂಪಾ ಕ್ಲಿನಿಕ್‌ನವರು ದಾಖಲಿಸಿದ್ದರು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ನಾಗಮ್ಮ ಮೃತಪಟ್ಟಿದ್ದಾರೆ. ಈ ಸಾವಿಗೆ ಡಾ. ಜಂಪಾ ಕ್ಲಿನಿಕ್‌ನವರೇ ಕಾರಣ ಎಂದು ನಾಗಮ್ಮ ಕುಟುಂಬಸ್ಥರು ಆರೋಪಿಸಿದ್ದಾರೆ.

Edited By : Manjunath H D
PublicNext

PublicNext

25/12/2021 02:57 pm

Cinque Terre

66.96 K

Cinque Terre

2