ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಟ್ಟಿದ ಹಸುಳೆಯನ್ನು ಬೀದಿಗೆಸೆದ ಹೆತ್ತವ್ವ : ಶಿಶು ರಕ್ಷಿಸಿದ ಶ್ವಾನ

ರಾಯಪುರ: ಅದೇಷ್ಟೋ ಜನ ಮಗು ಪಡೆಯಲು ವಿವಿಧ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನು ಕೆಲವರು ಹೆತ್ತ ಕೂಸನ್ನು ಕಸದ ತೊಟ್ಟಿಗೆ, ಬೀದಿಗೆ ಎಸೆಯುತ್ತಾರೆ. ಸದ್ಯ ಇಲ್ಲೊಬ್ಬ ಹೆತ್ತವ್ವ ಹಸುಗೂಸನ್ನು ಬೀದಿಗೆ ಎಸೆದ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ವಿಚಿತ್ರ ನೋಡಿ ಹೀಗೆ ಹೆತ್ತವಳು ಹಸುಳೆಯನ್ನು ಬೀದಿಗೆ ಎಸೆದ ಬಳಿಕ ಆ ನವಜಾತ ಶಿಶುವನ್ನು ರಕ್ಷಿಸಿದ್ದು ಶ್ವಾನಗಳು ಎನ್ನುವುದು ವಿಶೇಷ. ಹೌದು ಮೈ ಕೊರೆಯುವ ಚಳಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನವಜಾತ ಶಿಶುವೊಂದನ್ನು ಹೊಲದಲ್ಲಿ ಬಿಟ್ಟು ಹೋಗಿದ್ದು, ರಾತ್ರಿಯಿಡೀ ನಾಯಿಯೊಂದು ಶಿಶು ಆರೈಕೆ ಮಾಡಿವೆ.

ಮುಂಗೇಲಿ ಜಿಲ್ಲೆಯ ಲೊರ್ಮಿಯ ಸರಿಸ್ಟಾಲ್ ಗ್ರಾಮದ ಹೊಲವೊಂದರಲ್ಲಿ ಹೆಣ್ಣು ಮಗುವನ್ನು ಬಿಟ್ಟು ಹೋಗಲಾಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡುತ್ತಿತ್ತು. ಬೆಳಿಗ್ಗೆ ಮಗುವಿನ ಅಳು ಕೇಳಿದ ಗ್ರಾಮಸ್ಥರು ಶಿಶು ರಕ್ಷಿಸಿದ್ದಾರೆ. ಸದ್ಯ ಪ್ರಾಣಿ ತೋರಿದ ಸಹಾನುಭೂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೊಕ್ಕುಳಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗುವನ್ನು ಬಿಟ್ಟು ಹೋಗಿದ್ದು ಮಾತ್ರ ಮನಕಲಕುವಂತಿದೆ.ಪೊಲೀಸರು ಸ್ಥಳಕ್ಕೆ ಆಗಮಿಸಿದ ಮಗುವನ್ನು ರಕ್ಷಿಸಿದ್ದಾರೆ.

Edited By : Nirmala Aralikatti
PublicNext

PublicNext

21/12/2021 09:41 pm

Cinque Terre

80.06 K

Cinque Terre

13

ಸಂಬಂಧಿತ ಸುದ್ದಿ