ಚೆನ್ನೈ: ಸಾಯುವುದು ಬಿಟ್ಟು ನನಗೇನೂ ತೋರುತ್ತಿಲ್ಲ.ಹೆಣ್ಣು ಎಲ್ಲಿಯೂ ಸುರಕ್ಷಿತವಾಗಿಲ್ಲ. ತಾಯಿ ಗರ್ಭ, ಸಮಾಧಿಯೆಷ್ಟೆ ಆಕೆಗೆ ಸುರುಕ್ಷಿತವಾದ ಜಾಗ. ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಹೀಗೆ ಡೆತ್ ನೋಟ್ ಬರೆದು ಮನೆಯಲ್ಲಿಯೇ ನೇಣು ಬಿಗಿದುಕೊಂಡ ಘಟನೆ ಈಗ ಬೆಳಕಿಗೆ ಬಂದಿದೆ.
ಚೆನ್ನೈನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ತನ್ನ ಡೆತ್ ನೋಟ್ ನಲ್ಲಿ ಹೀಗೆ ಇಡೀ ಹೆಣ್ಣು ಜನ್ಮದ ನೋವನ್ನ ಹೇಳಿದ್ದಾಳೆ. ಶಾಲೆ ಸೇರಿದಂತೆ ಯಾವುದೇ ಜಾಗದಲ್ಲೂ ಹೆಣ್ಣು ಮಕ್ಕಳು ಸೇಫ್ ಅಲ್ಲವೇ ಅಲ್ಲ. ಎಲ್ಲೂ ಈಕೆಗೆ ಸುರಕ್ಷತೆ ಇಲ್ಲವೇ ಇಲ್ಲ ಅಂತಲೇ ಬರೆದಿದ್ದಾಳೆ.
ಪಡಂಬಾಕ್ಕಂನ ಸರ್ಕಾರಿ ಶಾಲೆಯ ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೂಡಲೇ, ಕಾಲೇಜಿನ ಇತರ ವಿದ್ಯಾರ್ಥಿನಿಯರು ಕಾಲೇಜಿನ ಪ್ರೊಫೆಸರ್ ಅಬ್ರಹಾಂ ಅಲೆಕ್ಸ್ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ. ಪ್ರೋಫೆಸರ್ ವರ್ತನೆ ಸರಿಯಿಲ್ಲ ಅಂತಲೂ ದೂರಿದ್ದಾರೆ.
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯಿಂದ ಸದ್ಯ ಪೊಲೀಸರು 48 ವರ್ಷದ ಫ್ರೊಫೆಸರ್ ನ್ನ ಬಂಧಿಸಿ ಕೇಸ್ ದಾಖಲಿಸಿದ್ದಾರೆ.
PublicNext
20/12/2021 01:39 pm